ಮುಂಬಯಿ, ಜು. 04 (DaijiworldNews/MB) : ಈ ಹಿಂದೆ ಸೈನಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ, ನಿರ್ಮಾಪಕ ಅಜಯ್ ದೇವಗನ್ ಇದೀಗ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕಥೆಯನ್ನು ಸಿನಿಮಾವನ್ನಾಗಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ಈ ಸಿನಿಮಾದ ಬಗ್ಗೆ ಅಜಯ್ ದೇವ್ಗನ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದು ಚೀನಾ ಭಾರತ ಘರ್ಷಣೆಯಲ್ಲಿ ಪ್ರಾಣತೆತ್ತ 20 ಯೋಧರ ಕಥೆಯ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬುದು ಇನ್ನಷ್ಟೇ ತಿಳಿದು ಬರೆಬೇಕಾಗಿದೆ. ಈ ಸಿನಿಮಾದ ಹೆಸರು ಕೂಡಾ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.
ಅಜಯ್ ದೇವಗನ್ ಫಿಲ್ಮ್ಸ್ ಹಾಗೂ ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ಮಾಣ ಮಾಡಲಿರುವ ಈ ಸಿನಿಮಾದಲ್ಲಿ ಅಜಯ್ ದೇವ್ಗನ್ ಕೂಡಾ ಕಾಣಿಸಿಕೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15 ರಂದು ನಡೆದ ಭಾರತ ಹಾಗೂ ಚೀನಾ ಸೇನೆಯ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರೆ ಹಲವು ಯೋಧರು ಗಾಯಗೊಂಡಿದ್ದರು.