ಹೈದರಾಬಾದ್, ಜು 10 (DaijiworldNews/PY): ಟಾಲಿವುಡ್ ಸ್ಟಾರ್ ಪ್ರಭಾಸ್ ಅವರ 20ನೇ ಸಿನಿಮಾದ ಟೈಟಲ್ ಘೋಷಣೆಯಾಗಿದ್ದು, ಶುಕ್ರವಾರ ಸ್ವತಃ ಪ್ರಭಾಸ್ ಅವರೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಇದು ಪ್ರಭಾಸ್ ಅವರ 20ನೇ ಸಿನಿಮಾಗಿದ್ದು, ಸಿನಿಮಾಕ್ಕೆ ರಾಧೆ ಶ್ಯಾಮ್ ಎಂದು ಟೈಟಲ್ ಇಡಲಾಗಿದೆ. ಪ್ರಭಾಸ್ ಅವರ ಸಿನಿಮಾ ಸೆಟ್ಟೇರಿದ ವೇಳೆಯಿಂದಲೂ ಚಿತ್ರದ ವಿಚಾರವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ, ಈಗ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.
ಪೂಜಾ ಹಾಗೂ ಪ್ರಭಾಸ್ ಅವರು ಪೋಸ್ಟರ್ನಲ್ಲಿ ರೊಮ್ಯಾಂಟಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಹಾಗೂ ಪೂಜಾ ಅವರ ಈ ರೊಮ್ಯಾಂಟಿಕ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಜುಲೈ 10ರಂದು ಪ್ರಭಾಸ್ ಅಭಿನಯದ ಬಾಹುಬಲಿ ತೆರಕಂಡಿತ್ತು. ಈ ದಿನ ಅವರಿಗೆ ಬಹಳ ವಿಶೇಷವಾದ ದಿನವಾಗಿದೆ. ಇದೇ ನೆನಪಿನಲ್ಲಿ ಅವರು ರಾಧೆಶ್ಯಾಮ್ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ರಾಧೆ ಶ್ಯಾಮ್ ಸಿನೆಮಾಕ್ಕೆ ರಾಧಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದು, ಪೂಜಾ ಹೆಗ್ಡೆ ಪ್ರಭಾಸ್ಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಈ ಪೋಸ್ಟರ್ ನೋಡಿದರೆ, ಪ್ರಭಾಸ್ ಅವರು ಲವರ್ ಬಾಯ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಪ್ರಭಾಸ್ ಅವರು, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಾಧೆ ಶ್ಯಾಮ್ ಸಿನಿಮಾ ಬರಲಿದ್ದು, ಈಗಾಗಲೇ ಪೋಸ್ಟರ್ ಕೂಡಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಸಿನಿಮಾ ಪೋಸ್ಟರ್ ಅನ್ನು ಶೇರ್ ಮಾಡಿ, ಅಭಿಮಾನಿಗಳೇ ಇದು ನಿಮಗಾಗಿ, ನೀವು ಮೆಚ್ಚಿಕೊಳ್ಳುತ್ತೀರಿ ಎಂದುಕೊಂಡಿದ್ದೇನೆ ಎಂದಿದ್ದಾರೆ.