ಮುಂಬೈ, ಜು. 20 (DaijiworldNews/MB) : ತನ್ನನ್ನು ಬಿ ಗ್ರೇಡ್ ನಟಿ ಎಂದು ಕರೆದಿರುವ ಬಾಲಿವುಡ್ ಕ್ವೀನ್ ಕಂಗನಾ ರೌನತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಟಿ ತಾಪ್ಸೆ ಪನ್ನು ವೈಯಕ್ತಿಕ ಕಾರಣಕ್ಕಾಗಿ ಒಬ್ಬರ ಸಾವಿನ ಲಾಭ ಪಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ರೌನತ್ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ವಿಷಯದಲ್ಲಿ ಚಲನಚಿತ್ರ ಮಾಫಿಯಾದ ಬಗ್ಗೆ ಮಾತನಾಡುತ್ತಾ, ತಾಪ್ಸೆ ಪನ್ನು ಹಾಗೂ ಸ್ವರಾ ಭಾಸ್ಕರ್ ಬಿ-ಗ್ರೇಡ್' ನಟಿಯರು ಎಂದು ಟೀಕೆ ಮಾಡಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪನ್ನು, ನಾವು ಮಾಡುವ ಇಂಡಸ್ಟ್ರಿಯನ್ನೇ ಅಪಹಾಸ್ಯ ಮಾಡುತ್ತಿರುವುದನ್ನು ನೋಡುವುದು ಬೇಸರದ ಸಂಗತಿ. ಈಗಷ್ಟೇ ಇಂಡಸ್ಟ್ರಿಗೆ ಬರುತ್ತಿರುವವರ ಪೋಷಕರು ಏನು ಯೋಚಿಸುತ್ತಾರೆ ಕಲ್ಪಿಸಿಕೊಳ್ಳಿ? ನಾವು ಹೊರಗಿನವರನ್ನು ತಿನ್ನಲು ಇಲ್ಲಿ ಕುಳಿತಿರುವ ಅಸಹ್ಯ ದುಷ್ಟ ಜನರೇ? ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಟ್ವೀಟ್ ಮೂಲಕ ಕಂಗನಾ ಹೇಳಿಕೆಗೆ ಲೇವಡಿ ಮಾಡಿರುವ ಪನ್ನು, ನಾನು 12 ಹಾಗೂ 10 ನೇ ತರಗತಿಯ ಫಲಿತಾಂಶದ ಬಳಿಕ ನಮ್ಮ ರಿಸಲ್ಟ್ ಕೂಡಾ ಬಂದಿದೆ ಎಂದು ಕೇಳಲ್ಪಟ್ಟೆ. ನಮ್ಮ ಗ್ರೇಡ್ ಸಿಸ್ಟಮ್ ಈಗ ಅಧಿಕೃತವೇ? ಇಷ್ಟರವರೆಗೆ ನಂಬರ್ ಸಿಸ್ಟಮ್ನಲ್ಲಿ ಮೌಲ್ಯ ನಿಗಧಿಪಡಿಸಲಾಗುತ್ತಿತ್ತು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.