ಮುಂಬೈ, ಜು. 21 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಾವು ರಹಸ್ಯವಾಗುತ್ತಲ್ಲಿದ್ದು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಮುಂಬೈ ಪೊಲೀಸರು ಮೂವರು ಮನೋವೈದ್ಯರು ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ ಅಭಿಷೇಕ್ ತ್ರಿಮುಖ್, ಕಳೆದ ಮೂರು-ನಾಲ್ಕು ದಿನಗಳಲ್ಲಿ ಹೇಳಿಕೆಗಳನ್ನು ಬಾಂದ್ರಾ ಪೊಲೀಸರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುಶಾಂತ್ ಅವರು ಈ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನಲೆಯಲ್ಲಿ ಈ ಮಾನಸಿಕ ಆರೋಗ್ಯ ವೃತ್ತಿಪರರ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಈ ನಡುವೆ ಸುಶಾಂತ್ ಅವರು 'ಬೈಪೋಲಾರ್ ಡಿಸಾರ್ಡರ್'ನಿಂದ ಬಳಲುತ್ತಿದ್ದಾರೆ ಎಂದು ಮನೋವೈದ್ಯರೊಬ್ಬರು ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಇತರ ವೈದ್ಯರು ನಟ ತೀರಾ ಖಿನ್ನತೆಯಿಂದ ಬಳಲುತ್ತಿದ್ದರು, ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಖಿನ್ನತೆಗೆ ವೈದ್ಯರು ಕಾರಣವನ್ನು ತಿಳಿಸಿಲ್ಲ.
ಇನ್ನು ಮುಖ್ಯವಾಗಿ ಅವರು ನವೆಂಬರ್ 2019 ರಿಂದ ಮನೋವೈದ್ಯರನ್ನು ಸಂಪರ್ಕಿಸಲು ಪ್ರಾರಂಭಿಸಿದರು. ಹಾಗೆಯೇ ಎರಡು ಮೂರು ಬಾರಿ ಭೇಟಿಯಾದ ಕೂಡಲೇ ವೈದ್ಯರನ್ನು ಬದಲಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.