ಮುಂಬೈ, ಜು.27 (DaijiworldNews/HR): ಬಾಲಿವುಡ್ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಆಗಾಗ ಸುದ್ದಿ ಆಗುತ್ತಿದ್ದು, ಇದೀಗ ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ಅವರು ಕರೀನಾ ಬಗ್ಗೆ ಮಾತನಾಡಿದ್ದು,"ಕರೀನಾ ಕೂದಲಿಗೆ ನಾನು ಕೈ ಹಾಕಿದರೆ ಆಕೆ ನನ್ನನ್ನು ಕೊಲೆ ಮಾಡುತ್ತಾಳೆ" ಎಂದು ಹೇಳಿದ್ದಾರೆ.

ಲಾಕ್ಡೌನ್ ವೇಳೆ ಅನೇಕ ಸೆಲೆಬ್ರಿಟಿಗಳು ಮನೆಯಲ್ಲೇ ಹೇರ್ಕಟ್ ಮಾಡಿಕೊಂಡಿದ್ದು, ತಮ್ಮ ಸಂಗಾತಿಗೆ ಹೇರ್ಕಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ವಿಚಾರದಲ್ಲಿ ಇದು ಸಾಧ್ಯವಾಗದ ಕಾರಣ ಕೂದಲಿನ ವಿಷಯವನ್ನು ಸೈಫ್ ಪ್ರಸ್ತಾಪಿಸಿದ್ದಾರೆ.
ಕರೀನಾಳ ಕೇಶ ವಿನ್ಯಾಸದ ಬಗ್ಗೆ ಮಾತನಾಡಿದ ಸೈಫ್, "ಅವಳು ದೇಶದ ಆಸ್ತಿ. ಆಕೆಯ ಕೂದಲನ್ನು ನಾನು ಕತ್ತರಿಸಲು ಹೋದರೆ ಅದು ಅನ್ಪ್ರೊಫೆಷನಲ್ ಆಗುತ್ತದೆ. ಮತ್ತೆ ಆಕೆಯ ಕೂದಲಿಗೆ ನಾನು ಕೈ ಹಾಕಿದರೆ ಖಂಡಿತಾ ನನ್ನನ್ನು ಸಾಯಿಸುತ್ತಾಳೆ. ನಾವಿಬ್ಬರೂ ನಟಿನೆಯಲ್ಲಿ ಬ್ಯುಸಿ ಇದ್ದೇವೆ. ಆದ್ದರಿಂದ ಪರಸ್ಪರ ಕೂದಲಿನ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳೋಕೆ ಆಗಲ್ಲ" ಎಂದರು.
ಇನ್ನು ಆಮಿರ್ ಖಾನ್ ನಾಯಕತ್ವದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಕರೀನಾ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.