ಹೊಸದೆಹಲಿ, ಮಾ.28(AZM): ದೇಶದಾದ್ಯಂತ ಮಾರ್ಚ್ 29ರಂದು ಬಿಡುಗಡೆಗೊಳ್ಳಲಿರುವ 'ರಾಮ್ ಕಿ ಜನ್ಮಭೂಮಿ' ಸಿನೆಮದ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ರಾಮಮಂದಿರ ವಿವಾದದ ವಿಷಯವನ್ನು 'ರಾಮ್ ಕಿ ಜನ್ಮಭೂಮಿ' ಸಿನೆಮಾದಲ್ಲಿ ಚಿತ್ರಿಸಲಾಗಿದ್ದು, ಈ ಹಿನ್ನಲೆ ಸಿನಿಮಾ ಬಿಡುಗಡೆಯಾದರೆ ಈಗ ನಡೆಯುತ್ತಿರುವ ಅಯೋಧ್ಯೆ ಜಮೀನು ವಿವಾದದ ಮಧ್ಯಸ್ಥಿಕೆ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಸಿನೆಮ ಬಿಡುಗಡೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸಿನೆಮಾದ ಬಿಡುಗಡೆಗೂ ಯಾವುದೇ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ. ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು 2 ವಾರದ ಬಳಿಕ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.