ಮುಂಬೈ,ಮಾ30(AZM): ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ಗಾಯಕ ನಿಕ್ ಜೋನಸ್ ದಂಪತಿಗಳು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ನಿಯತಕಾಲಿಕೆ ಒಂದು ವರದಿ ಮಾಡಿದೆ.
ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿಗಳ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಓಕೆ ಎಂಬ ನಿಯತಕಾಲಿಕೆ ವರದಿ ಮಾಡಿದೆ.
ಕಳೆದ ಡಿಸೆಂಬರ್ನಲ್ಲಿ ವಿವಾಹವಾಗಿದ್ದ ಈ ಜೋಡಿ ಒಬ್ಬರನ್ನೊಬ್ಬರು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದ ಸಮಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು 'ಒಕೆ' ನಿಯತಕಾಲಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮೂಲಗಳ ಪ್ರಕಾರ, ನಿಕ್ ಅವರ ಕುಟುಂಬದವರಿಗೆ ಪ್ರಿಯಾಂಕಾ ಕುರಿತು ಹಿಂದೆ ಇದ್ದ ಉತ್ತಮ ಅಭಿಪ್ರಾಯ ಈಗ ಇಲ್ಲ. ಹೀಗಾಗಿ ಅವರೂ ವಿಚ್ಚೇದನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಿಕ್-ಪ್ರಿಯಾಂಕಾ ಸಂಬಂಧ ಕಡಿದುಕೊಂಡರೆ ಹಣಕಾಸು ವಿಚಾರದಲ್ಲಿಯೂ ಜಗಳವೇರ್ಪಡುವ ಸಾಧ್ಯತೆ ಇದೆ ಎಂದೂ ವರದಿ ಉಲ್ಲೇಖಿಸಿದೆ.