ಮುಂಬೈ,ಏ01(AZM):ಯಶಸ್ಸಿನ ತುತ್ತತುದಿಯಲ್ಲಿರುವ ಬಾಲಿವುಡ್ ನಟಿ ಆಲಿಯಾ ಭಟ್ ಕೂಡಾ ಆಂಗ್ ಸೈಟಿಯಿಂದ ಬಳಲುತ್ತಿದ್ದಾರೆಯಂತೆ. ಈ ಕುರಿತು ಒಂದು ಸಂದರ್ಶನದಲ್ಲಿ ಅವರು ತಮ್ಮ ಮನಸ್ಸನ್ನು ಬಿಚ್ಚಿದ್ದಾರೆ.
ಆಲಿಯಾ ಭಟ್ ಇದೀಗ ಬಾಲಿವುಡ್ ನಾಯಕಿಯರಲ್ಲಿ ಟಾಪ್ ಅಲ್ಲಿ ಇರುವವರು. ಅವರು ಅಭಿನಯಿಸಿದ ಚಿತ್ರಗಳೆಲ್ಲಾ ಒಂದರ ಹಿಂದೆ ಒಂದು ಎಂಬಂತೆ ಹಿಟ್ ಆಗುತ್ತಿದೆ. ಅಲ್ಲದೆ ಅವರ ಬಾಳ ಸಂಗಾತಿಯಾಗಿಯೂ ರಣಭೀರ್ ಕಪೂರು ಕೂಡಾ ಬರಲಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೂಡಾ ಅವರು ಆತಂಕಕ್ಕೆ (ಆಂಗ್ಸ್ ಸೈಟಿ) ಒಳಗಾಗಿದ್ದಾರೆ ಅಂತೆ.
ನನಗೆ ಡಿಪ್ರೆಷನ್ ಇಲ್ಲ. ಆದರೆ, ಆಂಗ್ಸೈಟಿ ಇದೆ. ಇದು ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಕಳೆದ 5-6 ತಿಂಗಳಿನಿಂದ ಹೀಗಾಗುತ್ತಿದೆ. ಆಂಗ್ಸೈಟಿ ಅಟ್ಯಾಕ್ ಅಲ್ಲ ಇದು. ಆದರೆ ಸಣ್ಣ ಪ್ರಮಾಣದ ತಳಮಳ ಕಾಣಿಸಿಕೊಳ್ಳುತ್ತಿದೆ. ಇದರ ಬಗ್ಗೆ ನನಗೆ ಅರಿವು ಇದೆ ಅನ್ನೋದೇ ಸಮಾಧಾನ. ನನ್ನ ಸಹೋದರಿ ಶಹೀನ್ ಭಟ್ನಿಂದ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಅವಳು ಡಿಪ್ರೆಷನ್ ವಿರುದ್ಧ ಹೋರಾಡಿದವಳು. ಅವಳ ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಇದು ಎಷ್ಟು ಕೆಟ್ಟದಾಗಿದ್ದರೂ ಪರವಾಗಿಲ್ಲ, ಅದನ್ನು ಅನುಭವಿಸುತ್ತೇನೆ. ಕೆಲವೊಮ್ಮೆ ನನಗೆ ಕಾರಣವೇ ಇಲ್ಲದೆ ಸುಮ್ಮನೆ ಅಳಬೇಕೆನ್ನಿಸುತ್ತದೆ. ಆಮೇಲೆ ಆ ಭಾವನೆ ಹೊರಟು ಹೋಗುತ್ತದೆ' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.