ಕೋಲ್ಕತ್ತಾಏ17(Daijiworld News/AZM)ಮಮತಾ ಬ್ಯಾನರ್ಜಿಯವರ ಹೋರಾಟದ ಬದುಕನ್ನು ಆಧರಿಸಿರುವ ಭಗಿನೀ ಎಂಬ ಬಂಗಾಲಿ ಚಿತ್ರದ ಬಿಡುಗಡೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು,ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಲೋಕಸಭಾ ಚುನಾವಣಾ ನಡುವೇ ಮೇ ೩ರಂದು ಬಿಡುಗಡೆಯಾಗುತ್ತಿರುವ ಭಗನೀ ಚಿತ್ರವನ್ನು ಬಿಡುಗಡೆಗೂ ಮುನ್ನ ಚುನಾವಣಾ ಆಯೋಗವು ವೀಕ್ಷಿಸಬೇಕೆಂದು ಪಶ್ಚಿಮ ಬಂಗಾಲದ ಬಿಜೆಪಿ ಘಟಕದ ಅಧ್ಯಕ್ಷ ಜಯ ಪ್ರಕಾಶ್ ಮಜುಮ್ದಾರ್ ಅವರು ತಮ್ಮ ದೂರು ಪತ್ರದಲ್ಲಿ ಹೇಳಿದ್ದಾರೆ. ಮೋದಿ ಬಯೋಪಿಕ್ ಚಿತ್ರದ ಸಂದರ್ಭದಲ್ಲಿ ಕೈಗೊಳ್ಳಲಾದ ನಿರ್ಧಾರದಂತೆ ಮಮತಾ ಬ್ಯಾನರ್ಜಿ ಚಿತ್ರದ ಬಿಡುಗಡೆಗೆ ಮುನ್ನ ಚುನಾವಣಾ ಆಯೋಗ ಅದನ್ನು ವೀಕ್ಷಿಸಬೇಕು ಎಂದು ಹೇಳಲಾಗಿದೆ
ಭಗನೀ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಾವು ಕೇವಲ ಮಮತಾ ಬ್ಯಾನರ್ಜಿ ಅವರ ಹೋರಾಟಮಯ ಬದುಕಿನಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿರುವುದಾಗಿ ಹೇಳಿದ್ದಾರೆ. ಹಾಗಿದ್ದರೂ ಟಿಎಂಸಿ ಯ ಅನೇಕ ಎದುರಾಳಿಗಳು ಈ ಚಿತ್ರ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಡುಗಡೆಯಾಗುವುದನ್ನು ಪ್ರಶ್ನಿಸಿದ್ದಾರೆ.