ಚಂಢೀಗಢ,ಏ20(Daijiworld News/AZM):ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಸೆಲೆಬ್ರೆಟಿಗಳ ಹಿಂದೆ ಬಿದ್ದಿದ್ದು. ಅಮೃತಸರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈಗಾಗಲೇ ಕಾಂಗ್ರೆಸ್ ನಿಂದ ಉರ್ಮಿಳಾ ಮಾತೋಂಡ್ಕರ್ ಹಾಗೂ ಬಿಜೆಪಿಯಿಂದ ಜಯಪ್ರದಾ ಕಣದಲ್ಲಿದ್ದು, ಇದೀಗ ಅಮೃತ್ ಸರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸನ್ನಿ ಡಿಯೋಲ್ ಕಣಕ್ಕಿಳಿಯಲಿದ್ದಾರೆ ಎಂಬ ಸಂಶಯಗಳು ಕಂಡು ಬಂದಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸನ್ನಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಏನೇ ಆಗಲೀ ಬಾಲಿವುಡ್ ಆಕ್ಷನ್ ಹೀರೋ ಸನ್ನಿ ಡಿಯೋಲ್ ಬಿಜೆಪಿ ಅಭ್ಯರ್ಥಿಯಾಗಿ ಅಮೃತಸರದಲ್ಲಿ ಸ್ಪರ್ಧಿಸುವರೇ ಎಂಬುವುದನ್ನು ಕಾದು ನೋಡಬೇಕಾಗಿದೆ.