ಹೈದರಾಬಾದ್,ಏ 25(Daijiworld News/MSP):ಮಂಗಳೂರು ಮೂಲದ ಬೆಡಗಿ ಅನುಷ್ಕಾ ಶೆಟ್ಟಿ ಬಿಗ್ ಬಾಸ್ ನಿರೂಪಕಿಯಾಗಲಿದ್ದಾರೆ. ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 3 ಆರಂಭವಾಗುತ್ತಿದ್ದು ಇದರ ನಿರೂಪಣೆಯ ಜವಾಬ್ದಾರಿ ಅನುಷ್ಕಾ ಶೆಟ್ಟಿ ಪಾಲಾಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಪಾತ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಅನುಷ್ಕಾ ಶೆಟ್ಟಿ ಸದ್ಯಕ್ಕೆ ಯಾವುದೆ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಳ್ಳದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ತೆಲುಗಿನ ಬಿಗ್ ಬಾಸ್ ನ್ನು ಜ್ಯೂನಿಯರ್ ಎನ್ಟಿಆರ್ ಅವರೇ ಈ ಬಾರಿಯೂ ನಿರೂಪಣೆ ಮಾಡಬೇಕಿತ್ತು. ಆದರೆ ಈ ಬಾರಿ ಹಲವು ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅವರ ಡೇಟ್ ಹೊಂದಾಣಿಕೆಯಾಗದ ಕಾರಣ ಬೇರೆ ನಿರೂಪಕರ ಅಗತ್ಯ ಬಿಗ್ ಬಾಸ್ ಕಾರ್ಯಕ್ರಮಕ್ಕಿತ್ತು. ಹೀಗಾಗಿ ಚಾನೆಲ್ ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ಸೀಸನ್ ನನ್ನು ಭಿನ್ನವಾಗಿ ತರಲು ಯೋಚಿಸಿರುವ ಚಾನೆಲ್ ಮಹಿಳಾ ನಿರೂಪಕಿಯನ್ನು ಆಯ್ಕೆಮಾಡಿಕೊಳ್ಳುವತ್ತ ಯೋಚನ್ ಮಾಡಿದ್ದು ಮಾತ್ರವಲ್ಲದೆ ಈ ಬಾರಿಯ ಸೀಸನ್ ನಲ್ಲಿ ಸ್ಪರ್ಧಿಗಳಾಗಿ ಪತಿ- ಪತ್ನಿಯನ್ನು ಬಿಗ್ ಬಾಸ್ ಮನೆಯೊಳಗೆ ಸ್ವರ್ಧಿಗಳನ್ನಾಗಿಸಲು ಯೋಚಿಸಿದೆಯಂತೆ.
ಅಂದ ಹಾಗೆ ಈ ಹಿಂದೆ ಕಾರ್ಯಕ್ರಮ ನಿರೂಪಿಸಿದ್ದ ಜ್ಯೂ. ಎನ್ಟಿಆರ್ಗೆ ಎಪಿಸೋಡ್ ಒಂದಕ್ಕೆ 50 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು.