ಉದಯಪುರ, ಮಾ 25(DaijiworldNews/AA): ನಟಿ ತಾಪ್ಸಿ ಪನ್ನು ತನ್ನ ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಅವರನ್ನು ಮಾ. 23 ರಂದು ಉದಯಪುರದಲ್ಲಿ ವಿವಾಹವಾಗಿದ್ದಾರೆ.

ನಟಿ ತಾಪ್ಸಿ ಹಾಗೂ ಮಥಾಯಸ್ ಬೋ ಅವರ ವಿವಾಹಕ್ಕೆ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ಇನ್ನು ಮದುವೆಗೆ ಸೆಲೆಬ್ರೆಟಿಗಳಾದ ಅನುರಾಗ್ ಕಶ್ಯಪ್ ಮತ್ತು ಕನಿಕಾ ಧಿಲ್ಲೋನ್ ಹಾಜರಾಗಿದ್ದಾರೆ.
ನಟಿ ತಾಪ್ಸಿ ಅವರ ತಪ್ಪಡ್ ಸಿನಿಮಾ ಸಹ ನಟ ಪಾವೈಲ್ ಗುಲಾಟಿ ಅವರು ಕೂಡ ಮದುವೆಗೆ ಹಾಜರಾಗಿದ್ದು, ಮದುವೆಯ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವೆಗೆ ಹಾಸ್ಯನಟ ಅಭಿಲಾಷ್ ಥಾಪಿಯಾಲ್ ಸಹ ಭಾಗವಹಿಸಿದ್ದರು.
ಇನ್ನು ಮೂಲಗಳ ಪ್ರಕಾರ ನಟಿ ತಾಪ್ಸಿ ಅವರು ಶೀಘ್ರದಲ್ಲೇ ಮುಂಬೈನಲ್ಲಿ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಪಾರ್ಟಿ ನೀಡಲಿದ್ದಾರೆ. ಅವರು ಪಾರ್ಟಿ ನೀಡುವ ದಿನಾಂಕವನ್ನು ಆದಷ್ಟು ಬೇಗನೇ ಘೋಷಿಸುವ ನಿರೀಕ್ಷೆಯಿದೆ.