ಚೆನ್ನೈ, ಮಾ 28(DaijiworldNews/ AK): ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಅವರುಗಳು ತೆಲಂಗಾಣದ ವನಪರ್ತಿಯ ರಂಗನಾಥಸ್ವಾಮಿದೇವಾಲಯದಲ್ಲಿ ಇಬ್ಬರು ಮದುಗೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದೀಗ ಅದಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಸಿದ್ಧಾರ್ಥ್ನ ಚಿತ್ರ ಹಂಚಿಕೊಂಡು, ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಅದಿತಿ ಹಂಚಿಕೊಂಡಿರುವ ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರೂ ಬೆರಳಿಗೆ ಉಂಗುರ ಹಾಕಿಕೊಂಡಿದ್ದಾರೆ. ‘ಸಿದ್ಧಾರ್ಥ್ ಒಪ್ಪಿಕೊಂಡು ಬಿಟ್ಟ’ ಎಂದು ಚಿತ್ರಕ್ಕೆ ಕ್ಯಾಪ್ಷನ್ ನೀಡಿರುವ ಅದಿತಿ ‘ಎಂಗೇಜ್ಡ್’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ತಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಚಿತವಾಗಿದೆ.
ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರಿಗೂ ಇದು ಎರಡನೇ ಮದುವೆ. ಇಬ್ಬರೂ ಸಹ ಮಹಾಸಮುದ್ರಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಗಲೇ ಈ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ಕಳೆದ ಒಂದೆರಡು ವರ್ಷಗಳಿಂದಲೂ ಈ ಜೋಡಿ ಲಿವಿನ್ ರಿಲೇಷನ್ಶಿಪ್ನಲ್ಲಿತ್ತು. ಹಲವು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಈ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಹಸೆಮಣೆ ಏರಲಿದ್ದಾರೆ.