ಮುಂಬೈ, ಮಾ 29(DaijiworldNews/ AK):ಬಾಲಿವುಡ್ ನಟ ರಣ್ಬೀರ್ ಕಪೂರ್- ಆಲಿಯಾ ಭಟ್ ಜೋಡಿ ತಮ್ಮ ಕನಸಿನ ಮನೆ ಕಟ್ಟುವುದಕ್ಕೆ ಮುಂದಾಗಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ 250 ಕೋಟಿ ರೂ.ಗೂ ಅಧಿಕ ಮೌಲ್ಯದ ಈ ಬಂಗಲೆ ಈಗ ರಾಹಾ ಹೆಸರಿಗೆ ನೋಂದಾಣಿ ಮಾಡಿಸಿದ್ದಾರೆ.ಕಪೂರ್ ಕುಟುಂಬದ ಕುಡಿ ರಾಹಾ ಕಪೂರ್ ಇದೀಗ 250 ಕೋಟಿ ರೂ. ಮೌಲ್ಯದ ಬಂಗಲೆಗೆ ಒಡತಿಯಾಗಿದ್ದಾಳೆ. ಈ ಮೂಲಕ ಅತೀ ಸಣ್ಣ ವಯಸ್ಸಿನ ಹೆಚ್ಚು ಆಸ್ತಿ ಹೊಂದಿದ ಸ್ಟಾರ್ ಕಿಡ್ ಎಂದು ರಾಹಾ ಖ್ಯಾತಿಯಾಗಿದ್ದಾರೆ.
ರಣ್ಬೀರ್ ತಂದೆ ರಿಷಿ ಕಪೂರ್ ಅವರು ಸಾಯುವ ಮೊದಲು ಈ ಸೈಟ್ಗೆ ಭೇಟಿ ನೀಡಿದ್ದರು. ಈ ಬಂಗಲೆಯನ್ನು ರಿಷಿ ಕಪೂರ್ ಇಷ್ಟಪಟ್ಟಿದ್ದರು. ಹಾಗಾಗಿ ದುಬಾರಿ ಮೌಲ್ಯದ ಬಂಗಲೆಯನ್ನು ರಾಹಾ ಹೆಸರಿಗೆ ರಿಜಿಸ್ಟರ್ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಈ ಸುದ್ದಿ ಹರಿದಾಡುತ್ತಿದೆ.