ಅಮೆರಿಕ,ಮೇ26(Daijiworld News/AZM): ಭಾರತೀಯ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನೈಕರ್ ಅವರು ವಿಶ್ವಸಂಸ್ಥೆಯ ಶಾಂತಿ ಯೋಜನೆಯ ಸುಡಾನ್ ದೇಶದ ನೇತೃತ್ವವನ್ನ ವಹಿಸಿಕೊಳ್ಳಲಿದ್ದಾರೆ.
ಯುಎನ್ ಮಿಷನ್ ಸುಡಾನ್ನ ಫೋರ್ಸ್ ಕಮಾಂಡರ್ ಆಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟ್ರೆಸ್ ಶೈಲೇಶ್ರನ್ನ ನೇಮಕ ಮಾಡಿದ್ದಾರೆ. 57 ವರ್ಷದ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನೈಕರ್ ರುವಾಂಡದ ಜನರಲ್ ಫ್ರ್ಯಾಂಕ್ ಕಮಾನ್ಜಿ ಅವರಿಂದ ತೆರವಾಗುವ ಸ್ಥಾನವನ್ನ ತುಂಬಲಿದ್ದಾರೆ. ಜನರಲ್ ಫ್ರ್ಯಾಂಕ್ ಕಮಾನ್ಜಿ ಇಂದು ನಿವೃತ್ತರಾಗುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿರುವ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನೈಕರ್, ಸದ್ಯ ಇನ್ಫ್ಯಾಂಟ್ರಿ ಸ್ಕೂಲ್ನ ಕಮಾಂಡಂಟ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.
ತಿನೈಕರ್ ಅವರಿಗೆ ಸೇವಾ ಮೆಡಲ್ ಮತ್ತು ವಿಶಿಷ್ಠ ಸೇವಾ ಮೆಡಲ್ನಿಂದ ಗೌರವಿಸಲಾಗಿದೆ.