ಮನಿಲಾ, ಸೆ.03 (DaijiworldNews/AK): ಫಿಲಿಫೈನ್ಸ್ನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು ಜನ ಪ್ರಯಾಣಿಕರು ಪರದಾಡುತವಂತಾಗಿದೆ ಅಲ್ಲದೇ ದೇಶಯಾಗಿ ಇಲೋಕೋಸ್ ನಾರ್ಟೆ ಪ್ರಾಂತ್ಯದ ಪಾವೊಯ್ ನಗರ ಸೇರಿದಂತೆ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಗಂಟೆಗೆ 75-125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಮಳೆ ಹೆಚ್ಚಾಗುವ ಆತಂಕ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ನವೋಟಾಸ್ ಬಂದರಿನ ಮನಿಲಾ ಕೊಲ್ಲಿಯಲ್ಲಿ ಲಂಗರು ಹಾಕಲಾಗಿದ್ದ ಕಮಿಲ್ಲಾ ಎಂಬ ತರಬೇತಿ ಹಡಗು ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ಹಡಗು ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದ ದೇಶದ ರಾಜಧಾನಿ ಮನಿಲಾ ಸೇರಿದಂತೆ ಹಲವು ಭಾಗಗಳಲ್ಲಿ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದ್ದಾರೆ.