ನೈರೋಬಿ, ಸೆ.6(DaijiworldNews/AA): ಕೀನ್ಯಾದ ವಸತಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 17 ಮಕ್ಕಳು ಸಾವನ್ನಪ್ಪಿ, 14 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಪ್ರಾಥಮಿಕ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಾವು ಘಟನೆಯ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ಜೊತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
2017 ರಲ್ಲಿ, ಇದೇ ರೀತಿಯ ಅವಘಡವು ನೈರೋಬಿಯಲ್ಲಿ ನಡೆದಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನು ಇತ್ತೀಚೆಗೆ ದೇಶಾದ್ಯಂತ ಬೋರ್ಡಿಂಗ್ ಶಾಲೆಗಳಲ್ಲಿ ನಡೆಯುತ್ತಿರುವ ಘಟನೆಯಿಂದಾಗಿ ಸುರಕ್ಷತಾ ಮಾನದಂಡಗಳ ಕುರಿತಂತೆ ಆತಂಕ ಮೂಡಿಸಿದೆ. ಸರ್ಕಾರದ ಅನುಸಾರ 2015 ರಿಂದ 2016 ರವರೆಗೆ ಸುಮಾರು 350 ಕೀನ್ಯಾದ ಶಾಲೆಗಳು ಬೆಂಕಿಗೆ ಆಹುತಿಯಾಗಿವೆ.