ವಾಷಿಂಗ್ಟನ್, ಅ.27(DaijiworldNews/AA): ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯವನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಎಂದು ಟೆಸ್ಲಾ, ವಿಶ್ವದ ನಂಬರ್ ಶ್ರೀಮಂತ ಉದ್ಯಮಿ ಮುಖ್ಯಸ್ಥ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧವನ್ನು ಯಾವ ರೀತಿ ತೋರಿಸಲಾಗಿದೆ ಎಂಬ ಸುದ್ದಿಯನ್ನು ಶೇರ್ ಮಾಡಿರುವ ಅವರು ವಿಕಿಪೀಡಿಯವು ಎಡಪಂಥೀಯರಿಂದ ನಿಯಂತ್ರಿಸಲ್ಪಡುತ್ತಿದೆ. ಜನರು ಅದಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಬರೆದುಕೊಂಡಿದ್ದಾರೆ.
ವಿಕಿಪೀಡಿಯದ 40 ಸೂಪರ್ ಸಂಪಾದಕರು ಇಸ್ರೇಲ್ ವಿರುದ್ಧ ಮತ್ತು ಹಮಾಸ್ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ಎಡಿಟ್ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು ದಾಖಲೆಗಳೊಂದಿಗೆ ವರದಿ ಪ್ರಕಟವಾಗಿತ್ತು.