ವಾಷಿಂಗ್ಟನ್, ನ.14(DaijiworldNews/TA):ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಮ್ಮ ಆಡಳಿತದ ಅಡಿಯಲ್ಲಿ ರಾಷ್ಟ್ರೀಯ ಗುಪ್ತಚರ (ಡಿಎನ್ಐ) ನಿರ್ದೇಶಕರಾಗಿ ಮಾಜಿ ಡೆಮಾಕ್ರಟ್ ತುಳಸಿ ಗಬ್ಬಾರ್ಡ್ ಅವರನ್ನು ನೇಮಿಸಿದ್ದಾರೆ. ಡೊನಾಲ್ಡ್ ಟ್ರಂಪ್ ತುಳಸಿ ಗಬ್ಬಾರ್ಡ್ ಅವರನ್ನು "ಹೆಮ್ಮೆಯ ರಿಪಬ್ಲಿಕನ್" ಎಂದು ಬಣ್ಣಿಸಿದ್ದಾರೆ.
ಡೆಮೋಕ್ರಾಟ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಮಾಜಿ ಅಭ್ಯರ್ಥಿಯಾಗಿ, ಅವರು ಎರಡೂ ಪಕ್ಷಗಳಲ್ಲಿ ವ್ಯಾಪಕ ಬೆಂಬಲವನ್ನು ಹೊಂದಿದ್ದಾರೆ - ಅವರು ಈಗ ಹೆಮ್ಮೆಯ ರಿಪಬ್ಲಿಕನ್ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುಳಸಿ ಗಬ್ಬಾರ್ಡ್ ಅವರು ಯುಎಸ್ ಮಿಲಿಟರಿಯಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅನುಭವಿಯಾಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಮತ್ತು 2013 ರಿಂದ 2021 ರವರೆಗೆ ಹವಾಯಿಯ ಎರಡನೇ ಜಿಲ್ಲೆಗೆ ಕಾಂಗ್ರೆಸ್ ಮಹಿಳೆಯಾಗಿ ಸೇವೆ ಸಲ್ಲಿಸಿದ್ದಾರೆ. ತುಳಸಿ ಅಮೆರಿಕದ ಮೊದಲ ಹಿಂದೂ ಮಹಿಳಾ ಸಂಸದೆ.
ಮಾಜಿ ಕಾಂಗ್ರೆಸ್ನ ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಡಿಎನ್ಐ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬುವುದಾಗಿ ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ, ತುಳಸಿ ನಮ್ಮ ದೇಶದ ಮತ್ತು ಎಲ್ಲಾ ಅಮೆರಿಕನ್ನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.