ಥೈಲ್ಯಾಂಡ್, ಏ.03(DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ಅವರು ಗುರುವಾರ, "ದಿ ವರ್ಲ್ಡ್ ಟಿಪಿಟಕ : ಸಜ್ಜಯ ಫೋನೆಟಿಕ್ ಎಡಿಷನ್" ಪ್ರದಾನ ಮಾಡಿದರು.

ಥೈಲ್ಯಾಂಡ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಪ್ರಧಾನಿ ಶಿನವತ್ರ ಅವರು ಇದೀಗ ನನಗೆ ತ್ರಿಪಿಟಕವನ್ನು ಉಡುಗೊರೆಯಾಗಿ ನೀಡಿದ್ದಾರೆ. 'ಬುದ್ಧ ಭೂಮಿ' ಭಾರತದ ಪರವಾಗಿ, ನಾನು ಅದನ್ನು ಕೈಮುಗಿದು ಸ್ವೀಕರಿಸಿದೆ. ಈ ವರ್ಷ, ನಮ್ಮ ಹಳೆಯ ಸಂಬಂಧಗಳು ಮಹಾಕುಂಭದಲ್ಲಿಯೂ ಕಂಡುಬಂದವು. ಥೈಲ್ಯಾಂಡ್ ಮತ್ತು ಇತರ ರಾಷ್ಟ್ರಗಳಿಂದ 600 ಕ್ಕೂ ಹೆಚ್ಚು ಬೌದ್ಧ ಭಕ್ತರು ಈ ಕಾರ್ಯಕ್ರಮದ ಭಾಗವಾಗಿದ್ದರು." ಎಂದು ಹೇಳಿದರು.
ಟಿಪಿಟಕ (ಪಾಲಿ) ಅಥವಾ ತ್ರಿಪಿಟಕ (ಸಂಸ್ಕೃತ)ವು ಬುದ್ಧನ ಬೋಧನೆಗಳ ಪವಿತ್ರ ಸಂಕಲನವಾಗಿದ್ದು, 108 ಸಂಪುಟಗಳನ್ನು ಒಳಗೊಂಡಿದೆ. ಇದನ್ನು ಬೌದ್ಧಧರ್ಮದ ಪ್ರಮುಖ ಗ್ರಂಥವೆಂದು ಪರಿಗಣಿಸಲಾಗಿದೆ, ಬೌದ್ಧ ರಾಷ್ಟ್ರಗಳಲ್ಲಿ ಇದನ್ನು ಆಳವಾಗಿ ಪೂಜಿಸಲಾಗುತ್ತದೆ.
ಭಗವಾನ್ ಬುದ್ಧನ ಜ್ಞಾನೋದಯದ ಭೂಮಿಯಾಗಿರುವ ಭಾರತವು, ಬೌದ್ಧ ಬೋಧನೆಗಳನ್ನು ಪ್ರಪಂಚದಾದ್ಯಂತ ಸಂರಕ್ಷಿಸುವಲ್ಲಿ ಮತ್ತು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಿನಿಮಯವು ಭಾರತ ಮತ್ತು ಥೈಲ್ಯಾಂಡ್ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಲಾಗಿದೆ.