ದುಬೈ, ಏ.09 (DaijiworldNews/AA): ಅರಬ್ ದೇಶದಲ್ಲಿ ಬಿಲ್ಡಿಂಗ್ ಮೆಟಿರಿಯಲ್ಸ್ ಪೂರೈಕೆ ಮೂಲಕ ಜನಪ್ರಿಯತೆ ಗಳಿಸಿ 25 ವರ್ಷ ಪೂರೈಸಿರುವ ಹರೀಶ್ ಶೇರಿಗಾರ್ ಆಡಳಿತ ನಿರ್ದೇಶಕರಾಗಿರುವ 'ಆಕ್ಮೆ' ಸಂಸ್ಥೆ ಪ್ರಸ್ತುತ ಪಡಿಸುವ ಸ್ಯಾಂಡಲ್ವುಡ್ ಟು ಬಾಲಿವುಡ್' ಎನ್ನುವ ಮ್ಯೂಸಿಕ್, ಡ್ಯಾನ್ಸ್ ಜೊತೆಗೆ ಕಾಮಿಡಿ ರಸದೌತಣ ನೀಡುವ ಕಾರ್ಯಕ್ರಮ ಏಪ್ರಿಲ್ 12 ಶನಿವಾರದಂದು ದುಬೈನ 'ಸ್ವಿಸ್ ಇಂಟರ್ನ್ಯಾಶನಲ್ ಸ್ಕೂಲ್ ಅಲ್-ಜದಾಫ್'ನಲ್ಲಿ ಪ್ರೀಸಿಯಸ್ ಪಾರ್ಟೀಸ್ & ಇಂಟರ್ನ್ಯಾಶನಲ್ ಸರ್ವೀಸ್ ಎಲ್.ಎಲ್.ಸಿ. ದುಬೈ ಸಂಯೋಜನೆಯಲ್ಲಿ ಜರುಗಲಿದೆ.






ಕಾರ್ಯಕ್ರಮಕ್ಕೆ 'ಉಚಿತ' ಪ್ರವೇಶವಿದ್ದು 2025 ಏ.12 ಸಂಜೆ 6 ಗಂಟೆಗೆ ಮುಖ್ಯ ಧ್ವಾರಗಳು ತೆರಯಲಿದ್ದು ಮುಂಚೆ ಬರುವ ಪ್ರೇಕ್ಷಕರಿಗೆ ಮೊದಲ ಆದ್ಯತೆ ಎಂದು ಆಯೋಜಕರು ತಿಳಿಸಿದ್ದಾರೆ.
ರಸದೌತಣ ನೀಡಲಿರುವ ಕಾರ್ಯಕ್ರಮಗಳು:
ಸ್ಯಾಂಡಲ್ವುಡ್ to ಬಾಲಿವುಡ್' ಕಾರ್ಯಕ್ರಮದಲ್ಲಿ 'ಸೌಲ್ & ಬೀಟ್ಸ್ ವಿಎಮ್ ಕ್ರ್ಯೂ' ದುಬೈ ತಂಡದಿಂದ ನೃತ್ಯ, ಹಾಗೂ ಗಮ್ಮತ್ ಕಲಾವಿದೆರ್ - ದುಬೈ ಕಲಾವಿದರಿಂದ ತುಳು ಹಾಸ್ಯ ನಾಟಕ ರಂಗ ಸಾರಥಿ ವಿಶ್ವನಾಥ ಶೆಟ್ಟಿ ನಿರ್ದೇಶನದ 'ಗಮ್ಮತೇ ಗಮ್ಮತ್' ಪ್ರದರ್ಶನಗೊಳ್ಳಲಿದೆ.
ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್ ಸಹಿತ ಗಾಯಕರಾದ ನಯನಾ ರಾಜಗೋಪಾಲ್, ನವೀದ್ ಮುಗುಂಡಿ, ಅಕ್ಷತಾ ರಾವ್, ಜೋಸೆಫ್ ಮ್ಯಾಥಿಸ್, ಗುಣಶೀಲ ಶೆಟ್ಟಿ, ವಿಘ್ನೇಷ್, ಸುರೇಶ್ ದೇವಾಡಿಗ, ಡಾ. ಪುಷ್ಪರಾಜ್ ಶೆಟ್ಟಿ, ಸನ್ನಿಥಿ ಶೆಟ್ಟಿ ಗಾನ ಮೋಡಿ ಮಾಡಲಿದ್ದು ರಾಜಗೋಪಾಲ ಮತ್ತು ತಂಡದವರ ಮ್ಯೂಸಿಕ್ ರಂಜಿಸಲಿದೆ.
10 ವರ್ಷದ ಬಳಿಕ ಅದ್ಧೂರಿ ಕಾರ್ಯಕ್ರಮ:
ಉದ್ಯಮಿ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ದುಬೈನಲ್ಲಿ 'ದೂಮ್ ಧಮಾಕಾ' ಹೆಸರಿನಲ್ಲಿ 2011 ರಲ್ಲಿ ಸ್ವಪ್ನಿಲ್, ವಿಐಪಿ ಹಾಗೂ 2013 ರಲ್ಲಿ ಕೃಷ್ಣ, ಸುದೇಶ್ ಮತ್ತು 2015 ರಲ್ಲಿ ಖ್ಯಾತ ಕಲಾವಿದರಾದ ಜಾನಿ ಲೀವರ್ ಹಾಗೂ ಅವರ ಪುತ್ರಿ ಜೇಮಿ ಲೀವರ್ ಅವರ ಹಾಸ್ಯ ಪ್ರದರ್ಶನಗೊಂಡಿತ್ತು. 2014 ರಲ್ಲಿ ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಸ್ಯಾಂಡಲ್ವುಡ್ to ಬಾಲಿವುಡ್' ಕಾರ್ಯಕ್ರಮ ನಡೆದಿತ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಾದ ಹಣವನ್ನು ಹರೀಶ್ ಶೇರಿಗಾರ್ ಅವರು ಅರ್ಹ ಫಲಾನುಭವಿಗಳಿಗೆ ವಿವಿಧ ಸದುದ್ದೇಶಕ್ಕಾಗಿ ದಾನ ನೀಡಿ ಮಾದರಿ ಕಾರ್ಯ ಮಾಡಿದ್ದರು.
ಆಕ್ಮೆ ಮತ್ತೊಮ್ಮೆ "ಸ್ಯಾಂಡಲ್ವುಡ್ನಿಂದ ಬಾಲಿವುಡ್ಗೆ" ಎಂಬ ಭವ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಉತ್ತಮ ಮನರಂಜನೆಯನ್ನು ನೀಡಲಿದ್ದು ಪ್ರಸಿದ್ಧ ಕಲಾವಿದರಿಂದ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಮಧುರ ಗೀತೆಗಳು ಮೋಡಿಮಾಡುವುದರೊಂದಿಗೆ ಆಕರ್ಷಕ ನೃತ್ಯಗಳು ಮತ್ತು ಹಾಸ್ಯ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತದೆ. ಈ ಹಿಂದಿನಂತೆ ಕಾರ್ಯಕ್ರಮವನ್ನು ಉದಾತ್ತ ಕಾರಣಕ್ಕಾಗಿ ಆಯೋಜಿಸಲಾಗಿದೆ. ಈ ಆದಾಯವನ್ನು ದೀನದಲಿತರು ಮತ್ತು ನಿರ್ಗತಿಕರಿಗಾಗಿ ಮೀಸಲಾಗಿರುಸುತ್ತೇವೆ. ಪ್ರಾಯೋಜಕರ ಔದಾರ್ಯ ಮತ್ತು ಅಮೂಲ್ಯ ಬೆಂಬಲ ಹಿಂದಿನ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದು ಈ ಬಾರಿಯೂ ಯಶಸ್ಸುಗೊಳ್ಳಲು ಎಲ್ಲರ ಸಹಕಾರ ಅಗತ್ಯ.
- ಹರೀಶ್ ಶೇರಿಗಾರ್ (ಆಕ್ಮೆ ಸಂಸ್ಥೆಯ ಆಡಳಿತ ನಿರ್ದೇಶಕರು)