ಬೀಜಿಂಗ್, ಸೆ. 04 (DaijiworldNews/AA): ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆದಿತ್ತು. ಇಬ್ಬರೂ ನಾಯಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ, ಕಿಮ್ ಜಾಂಗ್ ತಂಡವು ಅವರು ಕುಳಿತಿದ್ದ ಕುರ್ಚಿಯನ್ನು ಕಿಮ್ ಜಾಂಗ್ ಜೊತೆಗಿರುವ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೀನಾದಲ್ಲಿ ಈಗ ಹಲವು ದೇಶಗಳ ನಾಯಕರ ಸಭೆ ನಡೆಯುತ್ತಿದೆ. ಅವರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ನಡುವೆ ಕೂಡ ಸಭೆ ನಡೆದಿದೆ.
ಇಬ್ಬರೂ ನಾಯಕರು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ವಿಭಿನ್ನ ಸಭೆಗಳಲ್ಲಿ ಭಾಗವಹಿಸುತ್ತಿರುವ ಅನೇಕ ದೃಶ್ಯಗಳು ಕಂಡುಬಂದಿವೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಭೆ ಬಳಿಕ ಕಿಮ್ ಜಾಂಗ್ ಜೊತೆಗಿರುವ ಸಿಬ್ಬಂದಿ ಅವರ ಸಭೆಯ ನಂತರ ಕೋಣೆಯಲ್ಲಿದ್ದ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಇದು ಸಾಮಾನ್ಯ ಶುಚಿಗೊಳಿಸುವಿಕೆ ಅಲ್ಲ, ಆದರೆ ಕಿಮ್ ಮುಟ್ಟಿದ ವಸ್ತುಗಳನ್ನು ಸರ್ವಾಧಿಕಾರಿ ತಂಡ ಸ್ವಚ್ಛಗೊಳಿಸಿದೆ. ಸದ್ಯ ಈ ವಿಡಿಯೋವನ್ನು ರಷ್ಯಾದ ಪತ್ರಕರ್ತ ಅಲೆಕ್ಸಾಂಡರ್ ಯುನಾಶೇವ್ ತಮ್ಮ ಟೆಲಿಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಉತ್ತರ ಕೊರಿಯಾದ ಅಧಿಕಾರಿಗಳು ಸಭೆಯ ಸ್ಥಳದಲ್ಲಿ ಕಿಮ್ ಜಾಂಗ್ ಅವರ ಕುರ್ಚಿಯ ಹಿಂಭಾಗವನ್ನು ಸ್ವಚ್ಛಗೊಳಿಸುವುದನ್ನು ಮತ್ತು ಅವರ ವಿಸ್ಕಿ ಗ್ಲಾಸ್ ಮತ್ತು ಟ್ರೇ ಅನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.
ಇದಲ್ಲದೆ, ಮತ್ತೊಬ್ಬ ಸಿಬ್ಬಂದಿ ಕಿಮ್ ಅವರ ಕುರ್ಚಿಯ ಕಾಲುಗಳು ಮತ್ತು ಹ್ಯಾಂಡ್ರೆಸ್ಟ್ ಅನ್ನು ಸಹ ಸ್ವಚ್ಛಗೊಳಿಸುತ್ತಾರೆ. ಇದಲ್ಲದೆ, ಅವರ ಮುಂದೆ ಇರಿಸಲಾದ ಮೇಜಿನಿಂದ ಕೂಡ ಗುರುತುಗಳನ್ನು ಸಹ ತೆಗೆದುಹಾಕಲಾಗುತ್ತದೆ. ಅವರು ಅಲ್ಲಿ ಬಂದು ಕುಳಿತಿದ್ದಕ್ಕೆ ಯಾವುದೇ ಕುರುಹು ಇಲ್ಲದಂತೆ ಸಿಬ್ಬಂದಿ ಮಾಡಿದ್ದಾರೆ.