ಮಸ್ಕತ್, 19 (DaijiworldNews/ AK): ಪ್ರಧಾನಿ ಮೋದಿ ಓಮನ್ಗೆ ಬಂದಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಕಿವಿಯಲ್ಲಿ ಆಭರಣ ಕಂಡುಬಂದಿದ್ದು, ಇದು ಹೊಸ ಸ್ಟೈಲ್ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಮೂರು ದೇಶಗಳ ಪ್ರವಾಸ ಕೈಗೊಂಡಿದ್ದ ಮೋದಿ ಎರಡು ದಿನಗಳ ಕಾಲ ಓಮನ್ಗೆ ಭೇಟಿ ನೀಡಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಓಮಾನ್ನ ಉಪಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಭೇಟಿಯಾದಾಗ ಪ್ರಧಾನಿ ಮೋದಿ ಕಿವಿಯೋಲೆ ರೀತಿಯ ಸಾಧನವನ್ನು ಧರಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಇದು ಮೋದಿಯವರ ಹೊಸ ಸ್ಟೈಲಾ ಎನ್ನುತ್ತಿದ್ದಾರೆ. ಆದರೆ ಇದು ನೈಜ ಸಮಯಕ್ಕೆ ಭಾಷಾಂತರಿಸುವ ಸಾಧನ ಎನ್ನುವುದು ತಿಳಿದುಬಂದಿದೆ.
ಉನ್ನತ ಮಟ್ಟದ ಸಭೆಯಲ್ಲಿ ಸುಗಮ ಸಂವಹನದ ಉದ್ದೇಶದಿಂದ ಈ ಸಾಧನವನ್ನು ಬಳಸಲಾಗುತ್ತದೆ. ಗಲ್ಫ್ ರಾಷ್ಟ್ರವಾದ ಒಮಾನ್ನ ಅಧಿಕೃತ ಭಾಷೆ ಅರೇಬಿಕ್. ಈ ಹಿನ್ನೆಲೆ ಭೇಟಿಯ ಸಂದರ್ಭದಲ್ಲಿ ಸುಲಭವಾಗಿ ಮಾತುಕತೆ ನಡೆಸುವುದು ಹಾಗೂ ತಮ್ಮ ಅಭಿಪ್ರಾಯವನ್ನು ಪರಸ್ಪರ ಹಂಚಿಕೊಳ್ಳಲು ಇದು ಪ್ರಮುಖ ಪಾತ್ರವಹಿಸುತ್ತದೆ.