ವಾಷಿಂಗ್ಟನ್ , ಜು 14 (Daijiworld News/MSP): ಬಳಕೆದಾರರ ಡೇಟಾವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದಲ್ಲಿ ಫೇಸ್ಬುಕ್ ಸಂಸ್ಥೆಗೆ ಅಮೇರಿಕಾ ಭಾರಿ ಪ್ರಮಾಣದ ದಂಡ ವಿಧಿಸಲು ಮುಂದಾಗಿದೆ.
ಕೇಂದ್ರೀಯ ವ್ಯಾಪಾರ ಆಯೋಗವು ಈಗಾಗಲೇ 35 ಸಾವಿರ ಕೋಟಿ ರೂಪಾಯಿ ದಂಡ ವಿಧಿಸಲು ಯೋಚನೆ ಮಾಡಿದ್ದು, ನ್ಯಾಯಾಂಗ ಇಲಾಖೆಯ ಅನುಮತಿ ದೊರೆತರೆ ಇದು ಜಾರಿಗೆ ಬರಲಿದೆ. ದಂಡದ ಜೊತೆಗೆ ಫೇಸ್ಬುಕ್ ಗೆ ಬಳಕೆದಾರರ ದತ್ತಾಂಶವನ್ನು ನಿರ್ವಹಣೆ ಮಾಡುವ ಕುರಿತಂತೆ ಮಾರ್ಗಸೂಚಿಯನ್ನು ಸಮಿತಿ ನೀಡುವ ಸಾಧ್ಯತೆಯಿದೆ.
ಕೇಬ್ರೀಜ್ ಅನಾಲಿಟಿಕಾ ಎಂಬ ರಾಜಕೀಯ ವಿಶ್ಲೇಷಣೆ ಕಂಪನಿಗೆ ಫೇಸ್ಬುಕ್ ಬಳಕೆದಾರರು ದತ್ತಾಂಶಗಳನ್ನು ನೀಡಿದ್ದು ಸೇರಿ ಇತ್ತೀಚಿನ ಹಲವು ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿತ್ತು.
ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ ಬುಕ್ ಬಳಕೆದಾರರ ದತ್ತಾಂಶಗಳನ್ನು ಬಳಸಿಕೊಂಡು ಹಲವು ದೇಶಗಳಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬ ಆರೋಪಗಳಿಗೆ ಸಂಬಂಧಪಟ್ಟಂತೆ ಭಾರತ ಸಚಿವಾಲಯವೂ ಕೂಡಾ ಈ ಹಿಂದೆ ಈ ವರದಿ ಕೇಳಿತ್ತು.