ಮೆಲ್ಬೋರ್ನ್, ಜು 18 (Daijiworld News/MSP):ಆಸ್ಟ್ರೇಲಿಯಾದ ನಾಲ್ಕು ವರ್ಷದ ಬಾಲಕನೊಬ್ಬ ತಾನು ಬ್ರಿಟನ್ನ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಂಡಿದ್ದು, ಈತನ ಹೇಳಿಕೆಗೆ ಜಗತ್ತೇ ಅಚ್ಚರಿ ವ್ಯಕ್ತಪಡಿಸಿದೆ.
ಈ ಬಾಲಕ ಹೆಸರು ಬಿಲ್ಲಿ ಕ್ಯಾಂಪ್ ಬೆಲ್ ಎಂದಾಗಿದ್ದು, ಈತನ ತಂದೆ ಆಸ್ಟ್ರೇಲಿಯಾದ ಖ್ಯಾತ ದೂರದರ್ಶನ ವಾಹಿನಿಯೊಂದರಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದಾರೆ. ಇವರೇ ಈ ವಿಚಾರ ಬಹಿರಂಗಪಡಿಸಿದ್ದು ತನ್ನ ಮಗನಾದ ಬಿಲ್ಲಿ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ನಂಬಿಕೊಂಡಿರುವುದಾಗಿ ವಿವರಿಸಿದ್ದಾರೆ.
" ಮಗ ಬಿಲ್ಲಿ ಗೆ ಆಗ ಎರಡು ವರ್ಷವಾಗಿ ಅಚಾನಕ್ ಆಗಿ ರಾಜಕುಮಾರಿ ಡಯಾನಾ ಅವರ ಪೋಟೋ ನೋಡಿದ್ದ, ಆಗ ತಕ್ಷಣ ಮಗ ಅದು ನಾನೇ ನಾನೇ ಎಂದು ಹೇಳತೊಡಗಿದ್ದ ಮಾತ್ರವಲ್ಲದೆ ನಾನು ರಾಜಕುಮಾರಿಯಾದಾಗ ಇದೇ ರೀತಿ ಇದ್ದೆ ಎಂದು ಹೇಳತೊಡಗಿದ ಅದು ಪ್ರಾರಂಭವಾದ ಡಯಾನ ಬಗೆಗಿನ ಗೀಳು ಇನ್ನು ನಿಂತಿಲ್ಲ" ಎಂದು ಬಾಲಕನ ತಂದೆ ಡೇವಿಡ್ ಕ್ಯಾಂಪ್ ಬೆಲ್ ಹೇಳಿದ್ದಾರೆ.
ಇನ್ನು ಅಚ್ಚರಿ ಎಂಬಂತೆ ಡಯಾನ ಬದುಕಿನ ಎಲ್ಲಾ ಘಟನೆಗಳನ್ನು ಬಿಲ್ಲಿ ಕ್ಯಾಂಪ್ ಬೆಲ್ ಚೆನ್ನಾಗಿ ವಿವರಿಸುತ್ತಾನಂತೆ. ರಾಜಕುಮಾರಿ ಕುಟುಂಬದ ಸದಸ್ಯರನ್ನು ಕಂಡಾಗ ಅವರನ್ನು ಚೆನ್ನಾಗಿ ಬಲ್ಲವರಂತೆ ಮಾತನಾಡುತ್ತಾನೆ ಎಂದು ತಂದೆ ವಿವರಿಸಿದ್ದಾರೆ. ರಾಜಕುಮಾರಿ ಡಯಾನಾ 1997 ರಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.