ಕೆನಡ, ಜ. 26 (DaijiworldNews/ AK):ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಕೆನಡಾ ಹೇಳಿಕೆ ನೀಡಿದೆ.

ಚೀನಾದೊಂದಿಗೆ ಕೆನಡಾ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಲ್ಲಿ, ಆ ದೇಶದ ಮೇಲೆ ಶೇ. 100 ಟ್ಯಾರಿಫ್ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆನಡಾದಿಂದ ಈ ಸ್ಪಷ್ಟನೆ ಬಂದಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ ಅವರು ಈ ಸ್ಪಷ್ಟನೆ ನೀಡಿದ್ದಾರೆ.
‘ಮುಂಚಿತವಾಗಿ ಸೂಚನೆ ಇಲ್ಲದೆ, ಮುಕ್ತ ಮಾರುಕಟ್ಟೆಯಲ್ಲದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎನ್ನುವ CUSMA (Canada US Mexico Agreement) ನಿಯಮಗಳಿಗೆ ಬದ್ಧರಾಗಿದ್ದೇವೆ. ಚೀನಾ ಆಗಲೀ ಬೇರೆ ಇತರ ನಾನ್ ಮಾರ್ಕೆಟ್ ಎಕನಾಮಿಯ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವ ಉದ್ದೇಶವೂ ಇಲ್ಲ’ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ ಹೇಳಿದ್ದಾರೆ.