ವಾಷಿಂಗ್ಟನ್, ಜು24(Daijiworld News/SS): ನಮ್ಮ ನೆಲದಿಂದ ಯಾವುದೇ ರೀತಿಯ ಉಗ್ರ ಸಂಘಟನೆಗಳು ಕಾರ್ಯಾಚರಣೆ ಮಾಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೌದು.. ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದಾರೆ. ಅವರೆಲ್ಲರೂ ಆಫ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದು ಪಾಕಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
2014ರಲ್ಲಿ ನಡೆದ ಸೇನಾ ಶಾಲೆಯ ಮೇಲಿನ ದಾಳಿ ಬಳಿಕ ಪಾಕಿಸ್ತಾನದ ರಾಜಕೀಯ ಮಹತ್ತರ ಬದಲಾವಣೆಗಳಾಗಿದ್ದು, ಉಗ್ರರಿಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಉಗ್ರರ ಮಟ್ಟಹಾಕಲು ಕ್ರಿಯಾ ಯೋಜನೆ ರೂಪಿಸಿವೆ. ಅದರಂತೆ ಇನ್ನು ಮುಂದೆ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಉಗ್ರ ಚಟುವಟಿಕೆಗಳಿಗೆ ಅನುವು ನೀಡದೇ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನಮ್ಮ ನೆಲದಿಂದ ಯಾವುದೇ ರೀತಿಯ ಉಗ್ರ ಸಂಘಟನೆಗಳು ಕಾರ್ಯಾಚರಣೆ ಮಾಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ. ಪ್ರಸ್ತುತ ಪಾಕಿಸ್ತಾನದಲ್ಲಿ ಸುಮಾರು 30 ಸಾವಿರದಿಂದ 40 ಸಾವಿರ ಉಗ್ರರು ಸಕ್ರಿಯರಾಗಿದ್ದಾರೆ. ಅವರೆಲ್ಲರೂ ನೆರೆಯ ಆಫ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ತರಭೇತಿ ಪಡೆದು ಪಾಕಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ. ಉಗ್ರರನ್ನು ನಿಶ್ಯಸ್ಥ್ರೀಕರಣಗೊಳಿಸುವ ಕೆಲಸಕ್ಕೆ ಹಾಕಿದ್ದೇ ತಮ್ಮ ನೇತೃತ್ವದ ಸರ್ಕಾರ ಎಂದು ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.