ಪಾಕಿಸ್ಥಾನ,ಆ.06 (Daijiworld News/RD): ವಿಶ್ವಸಂಸ್ಥೆ ನಿರ್ಣಯದ ಪ್ರಕಾರ, ಕಾಶ್ಮೀರಿಗಳಿಗೆ ನಮ್ಮೆಲ್ಲರಂತೆ ಎಲ್ಲಾ ಹಕ್ಕುಗಳನ್ನು ನೀಡಬೇಕು. ಸ್ವಾತಂತ್ರ್ಯದ ಹಕ್ಕನ್ನು ಕೂಡ ನೀಡಬೇಕು. ಈ ಎಲ್ಲಾ ಕಾರ್ಯಗಳನ್ನು ವಿಶ್ವಸಂಸ್ಥೆ ಮಾಡಬೇಕು ಆದರೆ ವಿಶ್ವಸಂಸ್ಥೆ ಯಾಕೆ ನಿದ್ರೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಅಸ್ತಿತ್ವದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದ್ ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ತೆಗೆದು ಹಾಕಿ ಐತಿಹಾಸಿಕ ನಿರ್ಣಯವನ್ನು ಕೈಗೊಂಡ ಭಾರತ ದೇಶದೆಲ್ಲೆಡೆ ಹರ್ಷವ್ಯಕ್ತವಾಗಿದ್ದು, ಆದರೆ ನೆರೆ ರಾಷ್ಟ್ರವಾದ ಪಾಕಿಸ್ಥಾನಕ್ಕೆ ತಲೆನೋವಾಗಿ ಪರಿಣಮಿಸಿದೆ. ಭಾರತದ ಈ ಬೆಳವಣಿಗೆಯ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗೆ ಶಾಹಿದ್ ಆಫ್ರಿದ್ ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ, ಜಮ್ಮು ಕಾಶ್ಮೀರದ ಪ್ರಜೆಗಳಿಗೆ ಎಲ್ಲಾ ರೀತಿಯ ಮೂಲಭೂತ ಹಕ್ಕುಗಳನ್ನು ನೀಡಬೇಕು, ನಮ್ಮಂತೆಯೇ ಅವರಿಗೂ ಸ್ವಾತಂತ್ರ್ಯದ ಹಕ್ಕನ್ನು ಕೂಡ ಕಲ್ಪಿಸಬೇಕು, ಇವುಗಳನ್ನೆಲ್ಲಾ ವಿಶ್ವಸಂಸ್ಥೆ ಮಾಡಬೇಕು, ಆದರೆ ವಿಶ್ವಸಂಸ್ಥೆ ಏಕೆ ಈ ವಿಚಾರದಲ್ಲಿ ನಿದ್ರಿಸುತ್ತಿದೆ ಎಂದು ಪ್ರಶ್ನಿಸಿದರು. ಕಾಶ್ಮೀರದಲ್ಲಿ ಅಮಾನವೀಯ ಕ್ರೂರ ಕೃತ್ಯಗಳು, ಆಕ್ರಮಣಗಳು, ಅಪರಾಧಗಳು ಆಗುತ್ತಿರುವುದನ್ನು ಗಮನಿಸಬಹುದು. ಈ ಬಗ್ಗೆ ಅಮೆರಿಕಾದ ಪ್ರಧಾನಿ ಮಧ್ಯಸ್ಥಿತಿ ವಹಿಸಿಕೊಂಡು ತಮ್ಮ ಪಾತ್ರವನ್ನು ಸರ್ಮಪಕವಾಗಿ ನಿರ್ವಹಿಸಬೇಕು. ಎಂದು ಟ್ವೀಟ್ ಮಾಡಿದ್ದಾರೆ.