ಇಸ್ರೇಲ್,ಆ 15 (Daijiworld News/RD): 73 ನೇ ಸ್ವಾತಂತ್ರ್ಯ ದಿನಾಚರಣೆಯ ದೇಶಾದ್ಯಂತ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ಭಾರತಕ್ಕೆ ಕೂಡ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯ ಕೋರಿ ಭಾರತದೊಂದಿಗೆ ಸ್ನೇಹ ಸಂಬಂದವನ್ನು ಗಟ್ಟಿಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೇಲ್ ’ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು’ ಎಂದು ಹೇಳುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಸಾಮಾನ್ಯವಾಗಿ, ವಿದ್ಯಾರ್ಥಿಗಳು, ಯುವಕರು, ಯುವತಿಯರು, ಹೀಗೆ ಬಂಧು ಬಳಗದವರು ಸ್ವಾತಂತ್ರ್ಯ ದಿನಾಚರಣೆಯ ಪೋಟೋ, ವಿಡಿಯೋವನ್ನು ಒಬ್ಬರಿಗೊಬ್ಬರು ವ್ಯಾಟ್ಸಸ್ ಆಪ್, ಫೇಸ್ಬುಕ್, ಇನ್ ಸ್ಟಾಗ್ರಾಂ, ಟ್ವೀಟರ್ ನಲ್ಲಿ ಶೇರ್ ಮಾಡುವ ಮೂಲಕ ಶುಭಾಶಯ ಕೋರುತ್ತೇವೆ, ಆದರೆ ಈ ಬಾರಿಯ ವಿಶೇಷವೆಂಬಂತೆ ಹಿಂದಿ, ಕನ್ನಡ ಇಂಗ್ಲೀಷ್ ಭಾಷೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯವನ್ನು ಇಸ್ರೇಲ್ ಟ್ವೀಟ್ ಮಾಡಿದೆ.
ಜಾಗತೀಕ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ರಾಷ್ಟ್ರ ಭಾರತ. ಇತರ ದೇಶಕ್ಕೆ ಸರಿಸಾಟಿಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಇದೀಗ ಹಲವು ಬದಲಾವಣೆಯ ಮೂಲಕ ಹೆಜ್ಜೆ ಇಡುತ್ತಿದೆ.
ಭಾರತ ಹಾಗೂ ಇಸ್ರೇಲ್ ಒಳ್ಳೆಯ ಬಾಂಧವ್ಯ ಹೊಂದಿದ ರಾಷ್ಟ್ರವಾಗಿದ್ದು ಈ ಹಿನ್ನೆಲೆಯಲ್ಲಿಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತಾಹಾಹ್ಯು ಹಾಗೂ ನರೇಂದ್ರ ಮೋದಿ ನಡುವೆ ಒಳ್ಳೆಯ ನಂಟು ಕೂಡ ಬೆಳೆದಿದೆ. ಹೀಗಾಗಿ ಇತ್ತೀಚೆಗೆ ಇಸ್ರೇಲ್ ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಇಸ್ರೇಲ್ ಪ್ರಧಾನಿಯ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿಯ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿತ್ತು. ಆದುದರಿಂದ ಭಾರತ ಹಾಗೂ ಇಸ್ರೇಲ್ ನಂಟು ಇನ್ನೂ ಗಟ್ಟಿಯಾಗಿದ್ದು, ಇದೀಗ ಇಸ್ರೇಲ್ 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕನ್ನಡವು ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಶುಭಾಷಯ ಕೋರಿ ವಿಶ್ವ ಮಟ್ಟದಲ್ಲಿ ಭಾರತದ ನಡುವಿನ ಸ್ನೇಹ ಸಂಬಂಧವನ್ನು ತೋರ್ಪಡಿಸಿದೆ.