ಇಸ್ಲಾಮಾಬಾದ್, ಆ.16(Daijiworld News/SS): ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ತೆಗೆದುಹಾಕಿರುವುದು ಉಗ್ರಗಾಮಿ ಕ್ರಮ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಮತ್ತೊಮ್ಮೆ ಹರಿಹಾಯ್ದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮತ್ತೆ ಟ್ವೀಟ್ ಮಾಡಿದ್ದಾರೆ. ಕಾಶ್ಮೀರ ಮುಕ್ತಿ ಹೋರಾಟವನ್ನು ಹತ್ತಿಕ್ಕುವ ಯತ್ನದಲ್ಲಿ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮೋದಿ ಸರ್ಕಾರದ ಫ್ಯಾಸಿಸ್ಟ್ ತಂತ್ರ ವಿಫಲವಾಗಲಿದೆ ಎಂದು ಹೇಳಿದ್ದಾರೆ.
ಫ್ಯಾಸಿಸ್ಟ್ (ಉಗ್ರ ಬಲಪಂಥೀಯ), ಹಿಂದೂ ಸರ್ವೋತ್ತಮವಾದಿ ಮೋದಿ ಸರ್ಕಾರವು ಸೈನ್ಯಗಳು, ಉಗ್ರಗಾಮಿಗಳು ಮತ್ತು ಭಯೋತ್ಪಾದಕರನ್ನು ಉನ್ನತ ಶಕ್ತಿಗಳಿಂದ ಸೋಲಿಸಬಹುದು ಎಂದು ಭಾವಿಸುವುದಾದರೆ, ಒಂದು ರಾಷ್ಟ್ರದ ಜನರು ಸಾವಿಗೆ ಹೆದರದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗೂಡಿದಾಗ ಅವರನ್ನು ಯಾವುದೇ ಶಕ್ತಿಯು ತಮ್ಮ ಗುರಿ ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಇತಿಹಾಸ ಹೇಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟೀಕಿಸಿದ್ದಾರೆ.