ಟೆಹ್ರಾನ್, ಜೂ. 27 (DaijiworldNews/AA): ಇರಾನಿನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ನೆಲೆಗಳು ಹಾಗೂ ಕರಾವಳಿ ರಾಡಾರ್ ನೆಲೆಗಳ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿವೆ.

ಇರಾನಿನ ಪಡೆಗಳು ಕದನ ವಿರಾಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ. ವಾಣಿಜ್ಯ ಸಾಗಣೆಯ ವಿರುದ್ಧ ಅನಗತ್ಯ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಶುಕ್ರವಾರ ನಡೆದ ದಾಳಿಗೆ ಪ್ರಬಲ ಪ್ರತಿಕ್ರಿಯೆ ಎಂದು ಯುಎಸ್ ತನ್ನ ಕಾರ್ಯಾಚರಣೆ ಬಗ್ಗೆ ವಿವರಿಸಿದೆ.
ಇನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದನ್ನು ಖಂಡಿಸಿದ್ದರು. ಸ್ಪಷ್ಟವಾಗಿ, ಇದು ನಮ್ಮ ಕದನ ವಿರಾಮ ಒಪ್ಪಂದದ ಮೂರ್ಖತನದ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದರು.