ಇಸ್ಲಾಮಾಬಾದ್, ಜೂ. 27 (DaijiworldNews/AA): ಪಾಕಿಸ್ತಾನದ ಮಾಜಿ ಸ್ಟಾರ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ, ನಿಷೇಧಿತ ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕರು ಹಾಗೂ ಹಫೀಜ್ ಸಯೀದ್ನ ಪುತ್ರ ತಲ್ಹಾ ಹಾಗೂ ಇತರೆ ಸಹಚರರು ಬಹಿರಂಗವಾಗಿ ಭಾಗವಹಿಸಿದ್ದು, ಇದೀಗ ವಿವಾದ ಸೃಷ್ಟಿಸಿದೆ.

ನಿಷೇಧಿತ ಜಮಾತ್-ಉದ್-ದವಾ ಅಂಗಸಂಸ್ಥೆಯಾದ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಉಗ್ರರ ಇರುವುದು ಕಂಡುಬಂದಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್ನ ಮಗ ತಲ್ಹಾ ಸಯೀದ್ ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.
ಇಸ್ಲಾಮಾಬಾದ್ನ ಪಿಎಂಎಂಎಲ್ ಮುಖ್ಯಸ್ಥ ಇನಾಮ್-ಉರ್-ರೆಹಮಾನ್ ಕಾಂಬೋಹ್, ಅಬ್ದುಲ್ಲಾ ತೂರ್, ಹಫೀಜ್ ಉಮರ್ ಮತ್ತು ಅಮ್ಜದ್ ಭಟ್ಟಿ ಸೇರಿದಂತೆ ಹಲವು ಕುಖ್ಯಾತ ಉಗ್ರರು ಸಾರ್ವಜನಿಕವಾಗಿ ಯಾವುದೇ ಭಯವಿಲ್ಲದೆ ಇಲ್ಲಿ ಓಡಾಡಿಕೊಂಡಿರುವುದು ಕಾಣಬಹುದಾಗಿದೆ.