ಜಕಾರ್ತಾ, ಜು. 07 (DaijiworldNews/AA): ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ, ನೀಡಿ ಸನ್ಮಾನಿಸಲಾಗಿದೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರು ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ ನೀಡಿ, ಸನ್ಮಾನ ಮಾಡಿದ್ದಾರೆ.
'ಬಿಂಟಾಂಗ್ ಆದಿಪೂರ್ಣ' ರಿಪಬ್ಲಿಕ್ ಇಂಡೋನೇಷ್ಯಾ' ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಯನ್ನು ರಾಷ್ಟ್ರ ಹಾಗೂ ಜನರ ಹಿತಕ್ಕಾಗಿ ಅಸಾಧಾರಣ ಸೇವೆ ಸಲ್ಲಿಸಿದ ನಾಗರಿಕರು ಮತ್ತು ಸೇನಾ ಸಿಬ್ಬಂದಿಗೆ ನೀಡಲಾಗುತ್ತದೆ.
'ಬಿಂಟಾಂಗ್ ರಿಪಬ್ಲಿಕ್ ಇಂಡೋನೇಷ್ಯಾ ಅದಿಪೂರ್ಣ' ಪ್ರಶಸ್ತಿಯನ್ನು ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರದಾನ ಮಾಡಲಾಗುತ್ತದೆ. ಇದು ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವವಾಗಿದೆ.