ಕತ್ತರ್, ಸೆ 10 (Daijiworld News/RD): ಕತ್ತರ್ ಕೆ ಸಿ ಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪವಿತ್ರ ಮೊಹರಂ ತಿಂಗಳ ಸಂದೇಶ ಕಾರ್ಯಕ್ರಮವು ಶುಕ್ರವಾರ ಮೈದರ್ ಕೆ ಸಿ ಎಫ್ ಸೆಂಟರ್ ನಲ್ಲಿ ಜರುಗಿತು.
ಕೆ ಸಿ ಎಫ್ ಕತ್ತರ್ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಿಂಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಇಸ್ಮಾಯಿಲ್ ಸೌದಿ ಕಿನ್ಯರವರು ಉದ್ಘಾಟಿಸಿದರು.
'ಹಿಜಿರಾ ಪಾಲಯನವಲ್ಲ, ಹೊಸತನಕ್ಕೆ ಪಯಣ' ಎಂಬ ವಿಷಯದ ಕುರಿತು ಮೊಹರಂನ ಮಹತ್ವ ಮತ್ತು ಸಂದೇಶ ಭಾಷಣ ನೀಡಿದ ಫಾರೂಖ್ ಸಖಾಫಿ ಎಮ್ಮೆಮಾಡು ಇವರು, ಧರ್ಮದ ಹೆಸರಿನಲ್ಲಿ ಒಂದು ವಿಭಾಗವು, ಮುಹರ್ರಂ ದೈವಿಕ ಶಕ್ತಿ ಎಂಬ ನೆಪದಲ್ಲಿ ನೆಡೆಸುತ್ತಿರುವ ಮಾಯ ಪ್ರದರ್ಶನವು ಅರ್ಥಶೂನ್ಯ ಆಚರವಾಗಿದೆ ಎಂದು ಹೇಳಿದರುಈ ಪವಿತ್ರವಾದ ಮುಹರ್ರಂ ತಿಂಗಳ ಒಂದರಿಂದ ಹತ್ತು ಅಥವಾ ತಿಂಗಳ ಒಂಬತ್ತು ಮತ್ತು ಹತ್ತನೆಯ ದಿನ ವ್ರತಾನುಷ್ಠಾನ ಅತೀ ಪುಣ್ಯವಾದ ಆರಾಧನೆಯಾಗಿರೂದಲ್ಲದೇ ಅನೇಕ ಅದ್ಭುತಗಳಿಗೆ ಸಾಕ್ಷಿಯಾದ ಈ ಪವಿತ್ರ ತಿಂಗಳ ದಿನರಾತ್ರಿಗಳಲ್ಲಿ ಪ್ರತಿಫಲಾರ್ಹ ಆರಾಧನೆಗಳನ್ನು ಪುಣ್ಯ ನಭಿ ಮತ್ತು ಅಲ್ಲಿನ ಅನುಚರರು ನಮಗೆ ಕಲಿಸಿರುತ್ತಾರೆ. ಅದರ ವಿಶಾಲ ವಿವರಣೆಯನ್ನು ಕೂಡ ನಮ್ಮ ಉಲಮಾಗಳು ವಿವರಿಸಿದ್ದು ಅವುಗಳನ್ನು ನಾವು ಅನುಸರಿಸಿ ಜೀವನದಲ್ಲಿ ಅಳವಡಿಸಿ ಬಾಳಬೇಕೆಂದು ಎಂದು ಹೇಳಿದರು.
ವೇದಿಕೆಯಲ್ಲಿ ಖತ್ತರ್ ಕೆ ಸಿ ಎಫ್ ಸಂಘಟನಾ ಅಧ್ಯಕ್ಷ ಹನೀಫ್ ಪಾತೂರು, ಹಣಕಾಸು ಕಾರ್ಯದರ್ಶಿ ಕಬೀರ್ ದೇರಳಕಟ್ಟೆ, ಮುನೀರ್ ಮಾಗುಂಡಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಮೊದಲಿಗೆ ಖತ್ತರ್ ಕೆ ಸಿ ಎಫ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.