ವಾಷಿಂಗ್ಟನ್, ಆ. 22 (DaijiworldNews/AA): ವ್ಯಾಪರ ಒಪ್ಪಂದ ಮಾತುಕತೆ ವಿಫಲವಾದ ಬೆನ್ನಲ್ಲೇ 20 ಬಿಲಿಯನ್ ಡಾಲರ್ ಮೌಲ್ಯದ ಕೆನಡಾದ ಉತ್ಪನ್ನಗಳ ಮೇಲೆ ಅಮೆರಿಕವು 50% ಸುಂಕ ವಿಧಿಸಿದೆ.

ಅಮೆರಿಕದ ಈ ಹೊಸ ಸುಂಕಗಳು ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ಈ ಆಮದು ತೆರಿಗೆಗಳು, ಕೆನಡಾ ಪ್ರತಿ ವರ್ಷ ಅಮೆರಿಕಕ್ಕೆ ಸಾಗಿಸುವ ವಸ್ತುಗಳ ಸುಮಾರು 5% ರಷ್ಟು ಪರಿಣಾಮ ಬೀರುತ್ತವೆ.
ಅಮೆರಿಕದ ಸುಂಕಕ್ಕೆ ನಾವು ಕೂಡ ಪ್ರತಿಸುಂಕ ವಿಧಿಸುತ್ತೇವೆ. ಯುಎಸ್ ಪ್ರಸ್ತಾಪಿಸಿದ ನಿಯಮಗಳು ಅನ್ಯಾಯ, ಆರ್ಥಿಕವಲ್ಲದವು ಮತ್ತು ಯಾವುದೇ ಒಪ್ಪಂದದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತವೆ ಎಂದು ಕೆನಡಾ ಪ್ರಧಾನಿ ಮಾರ್ಕೊ ಕಾರ್ನಿ ತಿಳಿಸಿದ್ದಾರೆ.