ನ್ಯೂಯಾರ್ಕ್, ಸೆ.24(Daijiworld News/SS): ಪರಿಸ್ಥಿತಿ ಕೈಮೀರುವುದಕ್ಕೂ ಮುನ್ನ ವಿಶ್ವಸಮುದಾಯ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಿಸದೇ ಎನ್'ಡಿಎ ಸರ್ಕಾರದ ವಿರುದ್ಧ ಪಾಕ್ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನಕ್ಕಿಂತ ಹೆಚ್ಚು ಭಾರತದಲ್ಲಿರುವ ಈಗಿನ ಪರಿಸ್ಥಿತಿಯ ಬಗ್ಗೆ ಆತಂಕಗೊಂಡಿದ್ದೇನೆ. ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಪರಿಸ್ಥಿತಿ ಕೈಮೀರುವುದಕ್ಕೂ ಮುನ್ನ ವಿಶ್ವಸಮುದಾಯ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಕಳೆದ 6 ವರ್ಷಗಳಿಂದ ಭಾರತದಲ್ಲಿನ ಬೆಳವಣಿಗೆಗಳು ಭಯಾನಕವಾಗಿದೆ. ಇದು ನನಗೆ ತಿಳಿದಿರುವ ಮಹಾತ್ಮಾ ಗಾಂಧಿ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾರತವಲ್ಲ. ಭಾರತವನ್ನು ಹಿಂದು ಸರ್ವೋಚ್ಛ ಸಿದ್ಧಾಂತ ಆಕ್ರಮಿಸಿಕೊಂಡಿದೆ. ಸರ್ವೋಚ್ಛವಾಗಿರುವುದಕ್ಕೆ ಮತ್ತೊಬ್ಬರನ್ನು ದ್ವೇಷಿಸಬೇಕಾಗುತ್ತದೆ. ಇದೇ ಸಿದ್ಧಾಂತವೇ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದು ಎಂದು ಹೇಳಿದ್ದಾರೆ.
ಭಾರತದಲ್ಲಿ ಈ ಹಿಂದೆ ಚರಿತ್ರೆಯಲ್ಲಿ ಮೂರು ಬಾರಿ ಯಾವ ಸಿದ್ಧಾಂತವನ್ನು ನಿಷೇಧಿಸಲಾಗಿತ್ತೋ ಅದೇ ಸಿದ್ಧಾಂತವೇ ಈಗ ಭಾರತ ದೇಶವನ್ನು ಆಳುತ್ತಿದೆ ಎಂದು ಇಮ್ರಾನ್ ಖಾನ್ ಟೀಕಿಸಿದ್ದಾರೆ.