ವಾಷಿಂಗ್ಟನ್, ಸೆ.30(Daijiworld News/SS): ದಕ್ಷಿಣ ಅಮೆರಿಕದ ಚಿಲಿ ಕರಾವಳಿಯಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ.
ತಾಲ್ಕಾದ ಪಶ್ಚಿಮದಿಂದ ಸುಮಾರು 83 ಮೈಲಿ ದೂರದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ. ಯಾವುದೇ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ತುರ್ತು ಸಂಸ್ಥೆ ತಿಳಿಸಿದೆ.
ಚಿಲಿ ಪ್ರದೇಶದ ಜನರು ಭೂಕಂಪನ ನಿರೋಧಕ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಬಲ ಭೂಕಂಪನದ ಬಳಿಕ ದುರ್ಬಲ ಮನೆಗಳು ಸಹ ಅಸ್ತಿತ್ವದಲ್ಲಿವೆ. ಹೀಗಾಗಿ ಭೂಕಂಪನದಿಂದ ಜೀವ ಹಾಗೂ ಆಸ್ತಿಪಾಸ್ತಿ ಹಾನಿಯಾಗುವ ಸಂಭವ ಕಡಿಮೆ ಎಂದು ಯುಎಸ್ಜಿಎಸ್ ತಿಳಿಸಿದೆ.
ವಿಶ್ವದ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಚಿಲಿ ಕೂಡ ಒಂದಾಗಿದೆ.