ಲಾಪಜ, ಅ 7 (Daijiworld News/RD): ವಯಸ್ಸಾದಂತೆ ಅರಳು, ಮರಳು ಎನ್ನುತ್ತಾ ಸಾವಿನ ದಿನಗಳನ್ನು ಎಣಿಸುತ್ತಿದ್ದೇವೆ ಎಂದು ಹೇಳುವ ವೃದ್ಧರನ್ನು ಗಮನಿಸುತ್ತೇವೆ, ಆದರೆ ಬೊಲಿವಿಯಾದ ಅಜ್ಜಿಯೊಬ್ಬರು ತನ್ನ ವಯಸ್ಸನ್ನು ಲೆಕ್ಕಿಸದೆ, ಅಪ್ರತಿಮ ಸಾಧನೆಗೈದಿದ್ದು, ಇಡೀ ಜಗತ್ತೇ ನಿಬ್ಬೆರಗಾಗಿಸುವಂತೆ ಮಾಡಿದ್ದಾರೆ.
ಬೊಲಿವಿಯಾದ 70 ವಯಸ್ಸಿನ ಮಿರ್ಥಾ ಮನೋಜ್ ಅಜ್ಜಿಯು, ಬೊಲಿವಿಯದ ಆಂಡಿಸ್ ಪರ್ವತದಲ್ಲಿ 11 ಸಾವಿರ ಅಡಿ ಎತ್ತರದಲ್ಲಿ ರಸ್ತೆಯಿದ್ದು, ಪಕ್ಕಾ ಉಬ್ಬುರಸ್ತೆಯಾಗಿದ್ದು, ಇಲ್ಲಿ ನಡೆಯುವುದೇ ಕಷ್ಟ. ಅದರಲ್ಲಿಯೂ ಸೈಕಲ್ ತುಳಿಯುವುದಂತೂ ಅಸಾಧ್ಯದ ಮಾತು. ಅಂತಹ ಜಾಗದಲ್ಲಿ 60 ಕಿ.ಮೀ. ಬಿಡುವಿಲ್ಲದೇ ಅಜ್ಜಿ ಸೈಕಲ್ ತುಳಿದು, ಪರ್ವತದ ತುದಿ ತಲುಪಿದ್ದಾರೆ. ಇದು ಮೃತ್ಯಕೂಪದ ಹೆದ್ದಾರಿ ಎಂದೇ ಕರೆಯಲಾಗುತ್ತಿದ್ದು, ತನ್ನ ಮುದಿ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಸದಾ ಹಿಮಪಾತ, ಮಳೆ, ಕಲ್ಲುಕುಸಿತವಾಗುವ, ಕಣಿವೆಯ ಆಸುಪಾಸಲ್ಲೇ ಸಾಗುವ ಈ ರಸ್ತೆಯಲ್ಲಿ ಸೈಕ್ಲಿಂಗ್ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಿರ್ಥಾ ಅಜ್ಜಿ, ತನ್ನ ಜೀವನದಲ್ಲಿ ಈ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂತಹ ಭಯಾನಕ ಕೂಟದಲ್ಲಿ ಭಾಗವಹಿಸಿದ ಅತಿಹಿರಿಯ ವ್ಯಕ್ತಿ ಮಿರ್ಥಾ ಅಜ್ಜಿ.