ಇಸ್ರೇಲ್, ಅ.08(Daijiworld News/SS): ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇಸ್ರೇಲ್ ಇದರ 12ನೇ ವರ್ಷದ `ಚೌತಿ ಸಂಭ್ರಮ' ತೆಲ್ ಅವೀವ್ನ ಲೂನಪಾರ್ಕ್ನಲ್ಲಿ ಅಕ್ಟೋಬರ್ 5ರಂದು ನಡೆಯಿತು.
ಅ.5ರಂದು ದೇವರ ಪ್ರತಿಷ್ಟಾಪನಾ ಪೂಜೆ ಜರುಗಿತು. ಬಳಿಕ `ಓಂಕಾರ' ತಂಡ ಮರೋಡಿಯವರಿಂದ ಭಜನೆ ನೆರವೇರಿತು. ನಂತರ ಆಟೋಟ ಸ್ಪರ್ಧೆ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ಇನ್ನಿತರ ಆಟೋಟ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಇಸ್ರೇಲ್ ತಂಡದಿಂದ ಭಾರತ ಶೈಲಿಯ ನೃತ್ಯ, ಸಮಿತಿಯ ಮಹಿಳಾ ಸದಸ್ಯರಿಂದ ಭರತನಾಟ್ಯ, ತುಳುನಾಡ ವೈಭವ ನೃತ್ಯ, ಸರ್ವ ಧರ್ಮ ಬಾಂಧವರಿಂದ ನಗಿಸುವ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ ನಡೆಯಿತು.
ಸಂಜೆ ವೇಳೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿಯನ್ನು ವಿತರಿಸಲಾಯಿತು. ಮಾತ್ರವಲ್ಲ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ಉದ್ಯಮಿ ರಾಜ್, ಸಮಿತಿಯ ಅಧ್ಯಕ್ಷ ಲಲ್ಲೂ ಭಾಯ್ ಹಾಗೂ ಕಾರ್ಯದರ್ಶಿ ಸತೀಶ್ ರೈ ಉಪಸ್ಥಿತರಿದ್ದರು. ವಸಂತ್ ವಂದಿಸಿದರು. ರೋಷನ್ ಹಾಗೂ ಸುನಿಲ್ ನಿರೂಪಿಸಿದರು.