ಮನಿಲಾ, ಅ.17(Daijiworld News/SS): ದಕ್ಷಿಣ ಫಿಲಿಪ್ಪೀನ್ಸ್ನ ಮಿಂದಾನೌ ದ್ವೀಪದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ.
ರಿಕ್ಟರ್ ಮಾಪಕದಲ್ಲಿ ದಾಖಲಾದ 6.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಐವರು ಸಾವಿಗೀಡಾಗಿ ಸುಮಾರು 60 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಫಿಲಿಪ್ಪೀನ್ಸ್ನ ಮಿಂದಾನೌ ದ್ವೀಪದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಫಿಲಿಪ್ಪೀನ್ಸ್ನ ಜ್ವಾಲಾಮುಖಿ ಮತ್ತು ಭೂಕಂಪನ ಸಂಸ್ಥೆಯು 15 ಅಡಿ ಆಳದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನವನ್ನು ದಾಖಲಿಸಿಕೊಂಡಿದೆ.
ಮ್ಯಾಗ್ಸೆಸೆ ನಗರದಲ್ಲಂತೂ ಹೆಚ್ಚಿನ ಮನೆಗಳು ಸಂಪೂರ್ಣ ನಾಶವಾಗಿವೆ. ದಾವೋ ಡೆಲ್ ಸರ್ ಪ್ರದೇಶದಲ್ಲಿರುವ ಶಾಪಿಂಗ್ ಮಾಲ್ ಕಂಪನದ ಬಳಿಕ ಬೆಂಕಿ ತಗುಲಿ ಬೆಂಕಿಗೆ ಆಹುತಿಯಾಗಿದೆ. ಆದರೆ, ಭೂಕಂಪನದಿಂದಾಗಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಅಧಿಕೃತ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಭೂಕಂಪನದಿಂದ ಮನೆ ಕುಸಿತವಾಗಿ ಉತ್ತರ ಕೊಟಬ್ಯಾಟೋ ಪ್ರಾಂತ್ಯದ ತುಲುನಾಂನಲ್ಲಿ 7 ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ.