ವಾಷಿಂಗ್ಟನ್, ಅ.18(Daijiworld News/SS): ಈ ಹಿಂದೆ ಸದೃಢ ಆರ್ಥಿಕ ಬೆಳವಣಿಗೆ ಅಂದುಕೊಂಡಿದ್ದ ಭಾರತದ ಆರ್ಥಿಕತೆ ಈ ಬಾರಿ ಶೇ. 6 ಕ್ಕೆ ಕುಸಿಯುವ ಸಾಧ್ಯತೆ ಇದೆ. ಭಾರತ ರಚನಾತ್ಮಕ ಸುಧಾರಣಾ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ. ಇಂತಹ ಸುಧಾರಣಾ ಕ್ರಮಗಳನ್ನು ಮುಂದುವರೆಸಲಿದೆ ಎಂಬ ನಿರೀಕ್ಷೆ ಹೊಂದಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಜಾರ್ಜೀವಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಬೆಳವಣಿಗೆ ಧೀರ್ಘಕಾಲೀನ ಕ್ರಮ ಕೈಗೊಳ್ಳಬೇಕಾಗಿದೆ. ಮಾನವ ಬಂಡವಾಳ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮಹಿಳಾ ಕಾರ್ಮಿಕ ಪಡೆಯನ್ನು ಇದರೊಂದಿಗೆ ಮುಂದುವರೆಸಬೇಕಾಗಿದೆ. ಭಾರತದಲ್ಲಿ ಪ್ರತಿಭಾವಂತ ಮಹಿಳೆಯರಿದ್ದಾರೆ ಆದರೆ, ಅವರು ಮನೆಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆರ್ಥಿಕತೆಯ ಮೂಲಭೂತ ವಿಷಯಗಳಲ್ಲಿ ಭಾರತ ಕೆಲಸ ಮಾಡಿದೆ. ಆದರೆ, ಹಣಕಾಸು ಕ್ಷೇತ್ರದಲ್ಲಿ ಸಮಸ್ಯೆಗಳಿವೆ ವಿಶೇಷವಾಗಿ ಬ್ಯಾಂಕೇತರ ಸಂಸ್ಥೆಗಳಲ್ಲಿ ಇದು ಹೆಚ್ಚಾಗಿದೆ. ಬ್ಯಾಂಕುಗಳನ್ನು ಕ್ರೊಢೀಕರಿಸಲು ಈಗ ಕ್ರಮ ಕೈಗೊಳ್ಳಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಅವರು ಸಹಾಯ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.