ಭೂತಾನ್, ಅ 19 (Daijiworld News/MSP): ಭೂತಾನ್ ನಲ್ಲಿ ಬೌದ್ಧ ದೇವಾಲಯವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಭಾರತೀಯ ಪ್ರವಾಸಿಗನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಅಭಿಜಿತ್ ರತನ್ ಹಜಾರೆ ಮತ್ತು ಇತರ 13 ಮಂದಿ ಪ್ರವಾಸಿಗರು ಬೈಕ್ ರೈಡ್ ಮೂಲಕ ಭೂತಾನ್ ಪ್ರಜೆ ನೇತೃತ್ವದಲ್ಲಿ ಭೂತಾನ್ ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದಾರಿ ಮಧ್ಯೆ ವಿಶ್ರಾಂತಿಗಾಗಿ ದೊಚುಲಾ ಎಂಬ ಪ್ರದೇಶದಲ್ಲಿ ನಿಂತಿದ್ದಾರೆ. ಬೈಕ್ ನಿಲ್ಲಿಸಲು ಸ್ಥಳಾವಕಾಶ ಇಲ್ಲದ ಕಾರಣ ಅಭಿಜಿತ್ ತಂಡ ಸ್ಥಳ ಸಿದ್ದಪಡಿಸುತ್ತಿದ್ದರು. ಈ ವೇಳೇ ಅಲ್ಲೇ ಇದ್ದ ಭೂತಾನ್ ಪ್ರಜೆಯಾಗಿದ್ದ ಕಾರ್ಪೇಂಟರ್ ಜಂಬ್ಯಾ ಎಂಬಾತನ ನೆರವು ಪಡೆದು ಏಣಿಯ ಮೂಲಕ ಅಭಿಜಿತ್ ದೇವಸ್ಥಾನದ ಮೇಲೆ ಶೂ ಹಾಕಿ ಹತ್ತಿ ಫೋಟೋಗೆ ಫೋಸ್ ನೀಡಿದ್ದಾರೆ. ಆಗ ಅವರ ಗುಂಪಿನ ಕೆಲವರು ಸಹ ಅಲ್ಲೇ ಇದ್ದರು. ಇದೆಲ್ಲಾ ಗುಂಪಿನಲ್ಲಿದ್ದ ಪ್ರವಾಸಿ ತಂಡದಲ್ಲಿ ಭೂತಾನ್ ನ ಪ್ರಜೆಗೆ ಗೊತ್ತಾಗಿರಲಿಲ್ಲ. ಇದೆಲ್ಲವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಈ ಘಟನೆ ಪೊಲೀಸರಿಗೆ ಗೊತ್ತಾದ ಕೂಡಲೇ ಅಭಿಜಿತ್ ಹಜಾರೆಯ ಪಾಸ್ ಪೋರ್ಟನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಕರೆದಿದ್ದಾರೆ. ತನಿಖೆ ಆರಂಭಿಸಲಾಗಿದೆ. ಅಭಿಜಿತ್ ನನ್ನು ಅಧಿಕೃತವಾಗಿ ಬಂಧಿಸಲಾಗಿದೆಯಾದರೂ ಕೂಡ ಕಳೆದ ಗುರುವಾರ ರಾತ್ರಿ ಅವರನ್ನು ಹೊಟೇಲ್ ನಲ್ಲಿ ತಂಗಲು ಬಿಡಲಾಗಿತ್ತು ತಪ್ಪಿಸಿಕೊಂಡಿರುವ ಕಾರ್ಪೇಂಟರ್ ಜಂಬ್ಯಾನನು ಪೊಲೀಸರು ಹುಡುಕುತ್ತಿದ್ದಾರೆ.