ಭಟ್ಕಳ, ಅ 20 (Daijiworld News/MSP): ಬಾಲಕನೋರ್ವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶುಕ್ರವಾರ ಸಂಜೆ ದುಬೈ ನಡೆದಿದೆ. ಮೃತ ಬಾಲಕನನ್ನು ಭಟ್ಕಳ ಮೂಲದ ಮುಹಮ್ಮದ್ ಶಾಬಂದ್ರಿ ಬಿನ್ ಮುಹಮ್ಮದ್ ಆಸೀಮ್ ಶಾ ಬಂದ್ರಿ(5) ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ದುಬೈನ ಅಲ್ ಗರೀರ್ ಕಟ್ಟಡದ ಮೂರನೇ ಅಂತಸ್ತಿನಲ್ಲಿರುವ ಮಕ್ಕಳ ಈಜುಕೊಳದಲ್ಲಿ ಇತರ ಮಕ್ಕಳೊಂದಿಗೆ ಬಾಲಕ ಈಜುತ್ತಿದ್ದ. ಆದರೆ ಈ ವೇಳೆ ಬಾಲಕ ಹಿರಿಯ ಈಜುಕೊಳಕ್ಕೆ ಅಕಸ್ಮಿಕವಾಗಿ ಬಂದಿದ್ದಾನೆ. ಈ ವೇಳೆ ಅಲ್ಲಿ ಈಜಾಡುತ್ತಿದ್ದ ಯುವಕರು, ಬಾಲಕ ಮುಳುಗುತ್ತಿರುವ ಗಮನಿಸಿದ್ದು, ಆತನನ್ನು ರಕ್ಷಿಸಿ ಪೊಲೀಸರ ಸಹಾಯದಿಂದ ಸಮೀಪದ ಆಸ್ಪತ್ರೆಗೆ ರವಾಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಶುಕ್ರವಾರ ರಾತ್ರಿ 11.30ಕ್ಕೆ ಮೃತಪಟ್ಟಿದ್ದಾನೆ.
ಮೃತ ಬಾಲಕ ಮುಹಮ್ಮದ್ ಶಾಬಂದ್ರಿ ದುಬೈ ನ ಸೆಂಟ್ರಲ್ ಸ್ಕೂಲ್ ನಲ್ಲಿ ಯು.ಕೆ.ಜಿ ಓದುತ್ತಿದ್ದ.