ಇಸ್ಲಾಮಾಬಾದ್, ಅ.22(Daijiworld News/SS): ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನಾ ನಾಯಕತ್ವದ ಸುಳ್ಳು ಹೇಳಿಕೆ ನೀಡುವ ಪ್ರವೃತ್ತಿ ಈ ಭಾಗದ ಶಾಂತಿಗೆ ತೊಡಕಾಗಿದೆ. ಇದು ವೃತ್ತಿಪರ ಮಿಲಿಟರಿ ನೈತಿಕತೆಗೆ ವಿರುದ್ಧವಾಗಿದೆ ಎಂದು ಪಾಕ್ ಹೇಳಿದೆ.
ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಮೂರು ಉಗ್ರಗಾಮಿ ಶಿಬಿರಗಳು ನಾಶವಾಗಿದೆ. ಒಂದು ಶಿಬಿರಕ್ಕೆ ತೀವ್ರ ರೀತಿಯ ಹಾನಿಯಾಗಿದೆ. ಆರರಿಂದ ಹತ್ತು ಪಾಕಿಸ್ತಾನಿ ಯೋಧರ ಹತ್ಯೆಯಾಗಿದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉಗ್ರರು ಸಾವಿಗೀಡಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿದ್ದರು.
ಆದರೆ, ಪಾಕ್ ಆಕ್ರಮಿತ ಕಾಶ್ಮೀರದ ಮೂರು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ ಎಂಬ ಭಾರತೀಯ ಸೇನೆಯ ಹೇಳಿಕೆ ಸುಳ್ಳು ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.