ಇಸ್ಲಾಮಾಬಾದ್, ಅ.24(Daijiworld News/SS): ಜಿಯುಐ-ಎಫ್'ನ ಯಾವುದೇ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನ ಸರ್ಕಾರದ ವಿರುದ್ಧ ವಿಪಕ್ಷಗಳು ಹಮ್ಮಿಕೊಂಡಿರುವ ಅಜಾದಿ ಮಾರ್ಚ್ ಪ್ರತಿಭಟನೆಗೆ ಹೆದರಿ ತಾವು ರಾಜಿನಾಮೆ ನೀಡುವುದಿಲ್ಲ. ಜೆಯುಐ-ಎಫ್ ಮುಖ್ಯಸ್ಥ ಫಜ್ಲೂರ್ ರೆಹಮಾನ್ ಅವರ ಪ್ರತಿಭಟನೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ದೂರಿದರು.
ಜಿಯುಐ-ಎಫ್ ನಡೆಸುತ್ತಿರುವ ಪ್ರತಿಭಟನೆ ಹಿಂದೆ ಒತ್ತಡಗಳು ಇದೆ. ಇದು ಒಂದು ನಿರ್ದಿಷ್ಟ ಕಾರ್ಯಸೂಚಿಯಿಂದ ಈ ಪ್ರತಿಭಟನೆ ನಡೆಸಲ್ಪಡುತ್ತಿದೆ. ಜಿಯುಐ-ಎಫ್'ನ ಯಾವುದೇ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಯು ಕಾರ್ಯಸೂಚಿ ಆಧಾರಿತವಾಗಿದ್ದು, ಇದಕ್ಕೆ ವಿದೇಶಿ ಬೆಂಬಲವಿದೆ. ಮೌಲಾನಾ ಅವರ ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ. ವಿರೋಧ ಪಕ್ಷದ ಕಾರ್ಯಸೂಚಿ ಏನೆಂಬುದೇ ಅರ್ಥವಾಗುತ್ತಿಲ್ಲ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.