ದುಬಾಯಿ, ಅ.27(Daijiworld News/SB): ಹದಿನೇಳನೇ ಮಹಡಿಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿರುವ ಸಂಧರ್ಭದಲ್ಲಿ ಅಯತಪ್ಪಿ ಬಿದ್ದು ಬಾಲಕಿಯೋರ್ವಳು ಧಾರುಣಾಂತ್ಯ ಕಂಡ ಘಟನೆ ಇಲ್ಲಿನ ಶೇಖ್ ಝಾಯದ್ ರಸ್ತೆ ಪಕ್ಕದ ಬಹುಮಳಿಗೆಯ ಕಟ್ಟಡವೊಂದರಲ್ಲಿ ನಡೆದಿದೆ. ಬಾಲಕಿಯನ್ನು ಏಷ್ಯಾ ಸಂಜೋತೆ ಎಂದು ಗುರುತಿಸಲಾಗಿದೆ.
ಸ್ಥಳೀಯ ಪೋಲಿಸ್ ಮೂಲಗಳ ಪ್ರಕಾರ ಹದಿನಾರು ವರ್ಷದ ಬಾಲಕಿ ತಾನು ವಾಸವಿದ್ದ ಫ್ಲ್ಯಾಟಿನ ಬಾಲ್ಕನಿಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದ ಸಂಧರ್ಭದಲ್ಲಿ ಆಕಸ್ಮಾತ್ ನಿಯಂತ್ರಣ ಕಳಕೊಂಡಿದ್ದಾಳೆ. ಸೆಲ್ಫಿ ತೆಗೆಯುತ್ತಿದ್ದ ಸಂಧರ್ಭದಲ್ಲಿ ಬಾಲಕಿ ಬಾಲ್ಕನಿಯ ಕೊನೆ ಅಂಚಿನಲ್ಲಿ ಕುರ್ಚಿಯೊಂದರಲ್ಲಿ ನಿಂತಿದ್ದಳು. ಕುರ್ಚಿಯು ಜಾರಿದ ತಕ್ಷಣ ನಿಯಂತ್ರಣ ಕಳಕೊಂಡ ಬಾಲಕಿ ಹಿಮ್ಮುಖವಾಗಿ ಮಹಡಿಯ ಕೆಳಗೆ ಬಿದ್ದಿದ್ದಾಳೆ. ಘಟನೆಯ ಸಂಧರ್ಭದಲ್ಲಿ ಅಲ್ಲೇ ಇದ್ದ ಬಾಲಕಿಯ ತಂಗಿ ಹೆತ್ತವರಿಗೆ ಘಟನೆಯನ್ನು ವಿವರಿಸಿದ್ದಾಳೆ. ಕೆಲ ಬಿದ್ದ ಬಾಲಕಿಯು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ದುಬಾಯ್ ಪೋಲಿಸ್ ಇಲಾಖೆಯ ಭದ್ರತಾ ವಿಭಾಗದ ಮುಖ್ಯಸ್ಥರಾದ ಫೈಸಲ್ ಅಲ್ ಖಾಸಿಂ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆಯ ನಂತರ ಕಟ್ಟಡಗಳಲ್ಲಿ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಮೊಬೈಲ್ ಫೋನುಗಳನ್ನು ಉಪಯೋಗಿಸುವಾಗ ಅಥಾವಾ ಚಿತ್ರಗಳನ್ನು ಸೆರೆಹಿಡಿಯುವಾಗ ಎಚ್ಚರ ವಹಿಸಬೇಕೆಂದು ದುಬಾಯ್ ಪೋಲಿಸ್ ಇಲಾಖೆ ಸಾರ್ವಜಣಿಕರಲ್ಲಿ ಮನವಿ ಮಾಡಿಕೊಂಡಿದೆ.