ರಿಯಾದ್, ಅ 29 (DaijiworldNews/SM): ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತಾ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಮ್ಮ ಸಹಕಾರಿ ವಿಚಾರಗಳು, ಭಯೋತ್ಪಾದನೆ ನಿಗ್ರಹ, ಭದ್ರತೆ ವಿಚಾರಗಳು ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅರಬ್ ಭೇಟಿ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಮತ್ತು ಸೌದಿ ಅರೇಬಿಯಾ,'ಭದ್ರತಾ ಸಹಕಾರ ಮತ್ತು ರಕ್ಷಣಾ ಕೈಗಾರಿಕೆಗಳ ಸಹಯೋಗದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ' ಎಂದಿದ್ದಾರೆ. ಇನ್ನು ಈ ಎರಡು ದೇಶಗಳ ಮಧ್ಯೆ ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.
ಉಭಯ ರಾಷ್ಟ್ರಗಳು ರಕ್ಷಣಾ ವ್ಯವಸ್ಥೆಯ ಬಗ್ಗೆ ಜಂಟಿಯಾಗಿರುವ ಸಮಿತಿಯನ್ನು ಹೊಂದಿದ್ದೇವೆ. ಅದು ನಿಯಮಿತ ಸಭೆಗಳನ್ನು ನಡೆಸುತ್ತದೆ. ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿ ಮತ್ತು ಸಹಕಾರದ ಹಲವಾರು ಕ್ಷೇತ್ರಗಳನ್ನು ನಾವು ಗುರುತಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇನ್ನು ಉಭಯ ರಾಷ್ಟ್ರಗಳ ನಡುವೆ ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಂಘರ್ಷ ಬಗೆಹರಿಸಲು ಸಮತೋಲನದ ವಿಧಾನ ಅಗ್ಯಗತ್ಯವಾಗಿದ್ದು, ಸಾರ್ವಭೌಮತ್ವದ ತತ್ತ್ವಗಳನ್ನು ಗೌರವಿಸುತ್ತೇವೆ. ಭಾರತವು ಈ ಪ್ರದೇಶದ ಎಲ್ಲಾ ದೇಶಗಳೊಂದಿಗೆ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು ಹಂಚಿಕೊಳ್ಳುತ್ತದೆ. ಸುಮಾರು 8 ದಶಲಕ್ಷಕ್ಕೂ ಅಧಿಕ ಸಂಖ್ಯೆಯ ಭಾರತೀಯ ನಿವಾಸಿಗಳು ಈ ಪ್ರದೇಶದಲ್ಲಿದ್ದಾರೆ ಎಂದು ಪ್ರಧಾಣಿ ನರೇಂದ್ರ ಮೋದಿ ತಿಳಿಸಿದ್ದಾರೆ.