ಇಸ್ಲಾಮಾಬಾದ್, ನ.01(Daijiworld News/SS): ಗುರುನಾನಕ್ ಜಯಂತಿ ಕಾರ್ಯಕ್ರಮ ಮತ್ತು ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆ ದಿನ ಅಲ್ಲಿಗೆ ಹೋಗುವ ಭಾರತೀಯ ಯಾತ್ರಿಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಪಾಕ್ ಹೇಳಿದೆ.
ಗುರು ನಾನಕ್ ಅವರ 550ನೇ ಜಯಂತಿ ಅಂಗವಾಗಿ ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರಧಾನಿ ಇಮ್ರಾನ್ ಖಾನ್ ಮಾಹಿತಿ ನೀಡಿದ್ದು, ಕರ್ತಾರ್ ಪುರಕ್ಕೆ ಹೋಗುವ ಯಾತ್ರಿಕರಿಗೆ ಎರಡು ವಿಷಯಗಳಿಂದ ವಿನಾಯ್ತಿ ನೀಡಲಾಗಿದೆ. ಅಲ್ಲಿಗೆ ಹೋಗುವ ಭಾರತೀಯರು ಪಾಸ್ ಪೋರ್ಟ್ ಹೊಂದಬೇಕಾಗಿಲ್ಲ ಯಾವುದಾದರೂ ಗುರುತು ಪತ್ರ ಹೊಂದಿದ್ದರೆ ಸಾಕು ಮತ್ತು ಮುಂಚೆಯೇ ಬುಕ್ಕಿಂಗ್ ಮಾಡುವ ಅಗತ್ಯ ಕೂಡ ಇಲ್ಲ ಎಂದು ಹೇಳಿದ್ದಾರೆ.
ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆ ದಿನ ಮತ್ತು ಗುರುನಾನಕ್ ರ 550ನೇ ಜಯಂತಿ ದಿನ ಯಾವುದೇ ಶುಲ್ಕ ವಿಧಿಸುವುದಿಲ್ಲ. ಭಾರತದಿಂದ ಕರ್ತಾರ್ ಪುರಕ್ಕೆ ಬರುವ ಯಾತ್ರಿಕರಿಗೆ ನಾನು ಪಾಸ್ ಪೋರ್ಟ್ ಮತ್ತು ಮುಂಗಡ ಬುಕ್ಕಿಂಗ್'ನಿಂದ ವಿನಾಯ್ತಿ ನೀಡಿದ್ದೇನೆ ಎಂದು ಹೇಳಿದ್ದಾರೆ.