ಇಸ್ಲಾಮಾಬಾದ್, ನ 04 (Daijiworld News/MSP): ಕೇಂದ್ರ ಸರ್ಕಾರ ದೇಶದ ಬಿಡುಗಡೆ ಮಾಡಿದ ಭಾರತದ ಹೊಸ ಭೂಪಟ ಕಂಡು ಪಾಕಿಸ್ತಾನ ತಲೆಕೆಡಿಸಿಕೊಂಡಿದೆ.
ಕಾಶ್ಮೀರದ ಸಂಪೂರ್ಣ ಭೂಭಾಗವು ಭಾರತಕ್ಕೇ ಸೇರಿದ್ದು ಎಂದು ಭೂಪಟದಲ್ಲಿ ಚಿತ್ರಿಸಿದ್ದಕ್ಕೆ ಪಾಕ್ ಭಾನುವಾರ ಆಕ್ಷೇಪ ವ್ಯಕ್ತಪಡಿಸಿದ್ದು,ಕಾನೂನಾತ್ಮಕವಾಗಿ ಒಪ್ಪಲಾಗದ ನಕ್ಷೆ ಎಂದು ಹೇಳಿದೆ.
ಗಿಲ್ಗಿಟ್ - ಬಲ್ಟಿಸ್ತಾನ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭಾಗಗಳೆಂದು ಗುರುತಿಸಿರೋದು ಸರಿಯಲ್ಲ. ಇದೊಂದು ಅಸಮರ್ಪಕ ನಕ್ಷೆ. ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಮಾಡಿದೆ. ಈ ಭೂಪಟವನ್ನು ಪಾಕಿಸ್ತಾನ ತಿರಸ್ಕರಿಸುತ್ತದೆ ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ.
ಭಾರತ ಶನಿವಾರ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಹೆಸರಿಡಲಾಗಿದ್ದ ಪ್ರದೇಶಗಳನ್ನು ಸಂಪೂರ್ಣವಾಗಿ ಭಾರತದ ಗಡಿಯೊಳಗೆ ಗುರುತಿಸಲಾಗಿದೆ. ಕೇಂದ್ರಾಡಳಿತ ಲಡಾಕ್ ಭೂಪ್ರದೇಶಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸೇರಿಸಲಾಗಿದೆ. ಪಿಓಕೆಯಲ್ಲಿರುವ ಮುಜಾಫರಬಾದ್ ಮತ್ತು ಮೀರ್ ಪುರ ಹೊಸ ಭೂಪಟದಲ್ಲಿ ಚಿತ್ರಸಲಾಗಿದೆ ವ್ಯಾಪ್ತಿಗೆ ಕಾರ್ಗಿಲ್ ಮತ್ತು ಲೇಸ್ ಜಿಲ್ಲೆಗಳನ್ನು ಸೇರ್ಪಡೆಗೊಳಿಸಲಾಗಿದೆ.