ದುಬೈ, ನ.06(Daijiworld News/SS): ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಸಂಭವಿಸಿದ ಅಪಘಾತದಲ್ಲಿ ಒರ್ವ ಭಾರತೀಯ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆ ಉತ್ತರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ಶಾರ್ಜಾದ ಮುವೀಲ್ಹಾದಲ್ಲಿ ಚಾಲನಾ ಪರವಾನಗಿ ಇಲ್ಲದೆ ಕಾರು ಚಲಾಯಿಸಿದ 17 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಕಾರು ಹರಿಸಿ ಹತ್ಯೆಗೆ ಕಾರಣನಾಗಿದ್ದಾನೆ. ಕಾರು ಪಾರ್ಕಿಂಗ್ ಮಾಡುವ ಸಮಯದಲ್ಲಿ ಈ ದುರಂತ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.